ಕುಂಬಳೆ ಉಪಜಿಲ್ಲಾ ಶಾಲಾ ವಿಜ್ಞಾನೋತ್ಸವ 28ರಿಂದ: ಸಿದ್ಧತೆ ಪೂರ್ಣ

ಕುಂಬಳೆ: ಕುಂಬಳೆ ಉಪಜಿಲ್ಲಾ ಕೇರಳ ಶಾಲಾ ವಿಜ್ಞಾನೋತ್ಸವ ಈ ತಿಂಗಳ 28, 29ರಂದು ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕುಂಬಳೆ ಜಿಎಸ್‌ಬಿಎಸ್ ಎಂಬಿಡೆಗಳಲ್ಲಿ ನಡೆಯಲಿದೆಯೆಂದು ಸ್ವಾಗತ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕುಂಬಳೆ ಉಪಜಿಲ್ಲೆಯ ಎಲ್‌ಪಿ, ಯುಪಿ, ಹೈಸ್ಕೂಲ್, ಹೈಯರ್ ಸೆಕೆಂಡರಿ ಶಾಲೆ ಸಹಿತ  ೮೮ ಶಾಲೆಗಳಿಂದಾಗಿ ಆರು ಸಾವಿರದಷ್ಟು ವಿದ್ಯಾರ್ಥಿಗಳು ಎರಡು ದಿನಗಳಲ್ಲಾಗಿ ನಡೆಯುವ  ವಿಜ್ಞಾನೋತ್ಸವದಲ್ಲಿ ಭಾಗವಹಿಸುವರು. ಪ್ರಥಮ ದಿನ ದಂದು  ಗಣಿತ ವಿಜ್ಞಾನ ವಿಭಾಗದ ಸ್ಪರ್ಧೆ ಹಾಗೂ ಎರಡನೇ ದಿನ ಸಮಾಜ ವಿಜ್ಞಾನ, ಮಾಹಿತಿ ತಂತ್ರ ಜ್ಞಾನ, ವೃತ್ತಿ ಪರಿಚಯ ವಿಭಾಗ ದಲ್ಲಿರುವ ಸ್ಪರ್ಧೆ ನಡೆಯಲಿದೆ.  ವಿಜ್ಞಾನೋತ್ಸವಕ್ಕೆ ೨೮ರಂದು ಬೆಳಿಗ್ಗೆ 9 ಗಂಟೆಗೆ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಕುಂಬಳೆ ಜಿಎಚ್‌ಎಸ್ ಎಸ್ ಪ್ರಾಂಶುಪಾಲ ರವಿ ಮುಲ್ಲಚ್ಚೇರಿ ಧ್ವಜಾರೋಹಣ ಗೈಯ್ಯುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಸಿ.ಎಚ್. ಕುಂಞಂಬು ಮುಖ್ಯ ಅತಿಥಿಗಳಾಗಿರು ವರು. ಕಾಸರಗೋಡು ಬ್ಲೋಕ್ ಪಂ. ಅಧ್ಯಕ್ಷೆ ಸಿ.ಎ ಸೈಮ ಸಹಿತ ಹಲವು ಗಣ್ಯರು ಭಾಗವಹಿಸುವರು. 

೨೯ರಂದು ಅಪರಾಹ್ನ ೩ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದ್ದು, ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ಅಧ್ಯಕ್ಷತೆ ವಹಿಸುವರು. ಕೆ.ಕೆ. ಶೆಟ್ಟಿ ಮುಖ್ಯ ಅತಿಥಿಯಾಗಿರುವರು. ಕುಂಬಳೆ ಸಿಐ ವಿನೋದ್ ಕುಮಾರ್, ಪಂಚಾ ಯತ್ ಸದಸ್ಯರು ಸಹಿತ ಹಲವರು ಭಾಗವಹಿಸುವರು. ಈಬಗ್ಗೆ  ಕುಂಬಳೆ ಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ತಾಹಿರಾ ಯೂಸಫ್, ರವಿ ಮುಲ್ಲಚ್ಚೇರಿ,  ವಿಜಯ ಕುಮಾರ್, ಅಶ್ರಫ್ ಕಾರ್ಲೆ, ಬಿ.ಎ. ರಹಮಾನ್ ಆರಿಕ್ಕಾಡಿ ಭಾಗವಹಿಸಿದರು.

RELATED NEWS

You cannot copy contents of this page