ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ಯುತ್ತಮ ರಾಷ್ಟ್ರೀಯ ಗುಣಮಟ್ಟ ಯಾದಿಗೆ ಸೇರ್ಪಡೆ
ಕಾಸರಗೋಡು: ರಾಜ್ಯದ 12 ಸರಕಾರಿ ಆಸ್ಪತ್ರೆಗಳಿಗೆ ಚಿಕಿತ್ಸಾ ರಂಗದಲ್ಲಿ ಅತ್ಯುತ್ತಮ ನಿರ್ವಣೆ ತೋರಿ ಅವುಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ರಾಷ್ಟ್ರೀಯ ಗುಣಮಟ್ಟ ಯಾದಿಯಲ್ಲಿ ಸ್ಥಾನ ಪಡೆದಿದೆ. ಇದರಲ್ಲಿ ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವೂ ಒಳಗೊಂಡಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜೋರ್ಜ್ ಈ ವಿಷಯ ತಿಳಿಸಿದ್ದಾರೆ.
ಈ ಹಿಂದೆ ಇದೇ ಯಾದಿಗೆ ರಾಜ್ಯದ 11 ಸರಕಾರಿ ಆಸ್ಪತ್ರೆಗಳನ್ನು ಒಳಪಡಿಸಲಾಗಿತ್ತು. ಅದರ ಬೆನ್ನಲ್ಲೇ ಕುಂಬ್ಡಾಜೆ ಸೇರಿದಂತೆ 12 ಆಸ್ಪತ್ರೆಗಳು ಈ ಯಾದಿಯಲ್ಲಿ ಸ್ಥಾನ ಪಡೆದಿದೆ.
ಇದರಂತೆ ಈ ಆಸ್ಪತ್ರೆಗಳಿಗೆ ನೇಶನಲ್ ಕ್ವಾಲಿಟಿ ಎಶೂರೆನ್ಸ್ ಸ್ಟಾಂಡರ್ಡ್ (ಎನ್‌ಕ್ಯೂಎಎಸ್) ಸರ್ಟಿಫಿಕೇಟ್‌ಗಳು ಹಾಗೂ ರಾಷ್ಟ್ರೀ ಯ ಅತ್ಯುತ್ತಮ ಗುಣಮಟ್ಟ ಅಂಗೀ ಕಾರಕ್ಕಿರುವ ಸರ್ಟಿಫಿಕೇಟ್ ಲಭಿಸಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟು 187 ಆರೋಗ್ಯ ಸಂಸ್ಥೆಗಳಿಗೆ ಎಕ್ಯೂಎಸ್ ಸರ್ಟಿಫಿಕೇಟ್ ಲಭಿಸಿದಂತಾಗಿದೆ.