ಕುಡಾಲ್ ಶ್ರೀ ಕೋಮರಾಯ ಚಾಮುಂಡಿ ದೈವಸ್ಥಾನದ ಶ್ರೀ ದೈವಗಳ

ಪುನರ್ ಪ್ರತಿಷ್ಠೆ ಹಾಗೂ ನೂತನ ಅಶ್ವತ್ಥಕಟ್ಟೆಯ ಲೋಕಾರ್ಪಣೆ ನಾಳೆಯಿಂದ

ಉಪ್ಪಳ: ಪಚ್ಲಂಪಾರೆ ಕುಡಾಲು ಶ್ರೀ ಕೋಮರಾಯ ಚಾಮುಂಡಿ ದೇವಸ್ಥಾನದ ಶ್ರೀ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಮತ್ತು ನೂತನ ಅಶ್ವತ್ಥಕಟ್ಟೆಯ ಲೋಕಾರ್ಪಣೆ  ಈ ತಿಂಗಳ ೮ರಂದು ವೇದಮೂರ್ತಿ ಕೆ.ಯು. ಪದ್ಮನಾಭ ತಂತ್ರಿ ನೀಲೇಶ್ವರ ಇವರ ನೇತೃತ್ವದಲ್ಲಿ  ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾ ಮೀಜಿ ಉಪಸ್ಥಿತಿಯಲ್ಲಿ  ಜರಗಲಿದೆ. 2.30ರಿಂದ ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಗೆ ಮೆರವಣಿಗೆ ಹೊರಡಲಿದೆ. ಸಂಜೆ ೫ ಗಂಟೆಗೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ತದನಂತರ ವೈದಿಕ ಕಾರ್ಯಕ್ರಮ ನಡೆಯಲಿದೆ.  8ರಂದು ಬೆಳಿಗ್ಗೆ ಗಣಪತಿ ಹೋಮ,ಕಲಶಪೂಜೆ ನಡೆಯಲಿದೆ. ಅನಂತರ ಶ್ರೀ ದವಗಳ ಪ್ರತಿಷ್ಠೆ, ಮಹಾಪೂಜೆ,  ಅನ್ನಸಂತ ರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ದತ್ತಾಂ ಜನೇಯ ಕಲಾ ಬಳಗ ರಾಮಾಡಿ ಕಣ್ವತೀರ್ಥ ಸಾದರಪಡಿಸುವ ತುಳುನಾಡ ವೈಭವ ನಡೆಯಲಿದೆ.

You cannot copy contents of this page