ಕೃಷಿಭವನದಿಂದ ವಿವಿಧ ಸವಲತ್ತು: ಅರ್ಜಿ ನೀಡಲು ಕೃಷಿಕರಿಗೆ ಹೆಚ್ಚಿನ ಹೊರೆ ಆರೋಪ

ಕಾಸರಗೋಡು: ಮಳೆಗಾಲ ಆರಂಭಗೊಂಡಿರುವುದರೊಂದಿಗೆ ಕೃಷಿ ಕಾರ್ಯಗಳು ಭರದಿಂದ ನಡೆಯುತ್ತಿದೆ. ಕೃಷಿಭವನದ ಮೂಲಕ ವಿವಿಧ ಸಸಿಗಳ ವಿವಿಧ ಸೌಲಭ್ಯಗಳ ವಿತರಣೆಯೂ ನಡೆಯುತ್ತಿದೆ. ಆದರೆ ಕೃಷಿಭವನದ ಮೂಲಕ ನೀಡುವ ಎಲ್ಲಾ ಸವಲತ್ತುU ಳನ್ನು ಪಡೆದುಕೊಳ್ಳಲು ಪ್ರತಿಸಲವೂ ನಿರ್ದಿಷ್ಟ ರೀತಿಯ ಅರ್ಜಿ ಫಾರ್ಮ್ ಭರ್ತಿಗೊಳಿಸಿ ನೀಡಬೇಕಾಗುತ್ತಿದೆ. ಆದರೆ ಅರ್ಜಿ ಫಾರ್ಮ್‌ಗಳು ಕೃಷಿಭವನದಲ್ಲಿ ಲಭಿಸುವುದಿಲ್ಲವೆಂದು ಕೃಷಿಕರು ದೂರುತ್ತಾರೆ.

ಅರ್ಜಿ ಫಾರ್ಮ್‌ನ ಪ್ರತಿಯನ್ನು ತೆಗೆದು ಭರ್ತಿಗೊಳಿಸಿ ನೀಡಬೇಕಾಗು ತ್ತಿದೆ. ಇದರ ಜೊತೆಯಲ್ಲಿ ಇತರ ಪ್ರಮಾಣಪತ್ರಗಳು, ತೆರಿಗೆ ರಶೀದಿಗಳ ಪ್ರತಿಗಳನ್ನು ನೀಡಬೇಕಾಗುತ್ತಿದೆ. ಇದು ಕೃಷಿಕರಿಗೆ ಭಾರೀ ಹೊರೆಯನ್ನು ಉಂಟುಮಾಡುತ್ತಿರುವುದಾಗಿ ಕೃಷಿಕರು ದೂರುತ್ತಾರೆ. ಕೇವಲ ನಾಲ್ಕು ಗಿಡಗಳು ಲಭಿಸಬೇಕಿದ್ದರೂ ಪ್ರತಿಭಾರಿಯೂ ಅರ್ಜಿ ನೀಡಬೇಕು. ಅದಕ್ಕೆ ಪ್ರತಿ ತೆಗೆಯಲು  ಹೆಚ್ಚಿನ ದರ ವೆಚ್ಚ ಮಾಡಬೇಕಾಗಿ ಬರುತ್ತಿರುವುದು ಕೃಷಿಕರಿಗೆ ಸಮಸ್ಯೆ ಉಂಟುಮಾಡಿದೆ. ಇದಕ್ಕೆ ಸೂಕ್ತ ಪರಿಹಾರ ಕೈಗೊಂಡು ಕೃಷಿಯಿಂದ ಕೃಷಿಕರನ್ನು ಹಿಂ ಜರಿಯುವಂತೆ ಮಾಡಬಾರದೆಂದು ಕೃಷಿಕರು ಆಗ್ರಹಿಸಿದ್ದಾರೆ.

You cannot copy contents of this page