ಕೆಎಸ್ಟಿಪಿ ರಸ್ತೆ ಬದಿ ಕಾಂಕ್ರೀಟ್ ಕುಸಿತ
ಬದಿಯಡ್ಕ: ಕುಂಬಳೆ-ಮುಳ್ಳೇರಿಯ ಕೆಎಸ್ಟಿಪಿ ರಸ್ತೆಯಲ್ಲಿ ಬದಿಯಡ್ಕ ಸಮೀಪ ಪೆರಡಾಲದಲ್ಲಿ ರಸ್ತೆ ಬದಿ ಕಟ್ಟಲಾಗಿದ್ದ ಎಸ್ಟೇಟ್ ಗೋಡೆ ಕುಸಿದು ಬಿದ್ದಿದೆ. ರಸ್ತೆ ಅಭಿವೃದ್ಧಿಗೊಳಿಸುವ ಅಂಗವಾಗಿ ಒಂದು ವರ್ಷ ಹಿಂದೆಯಷ್ಟೇ ಈ ಗೋಡೆ ಕಟ್ಟಲಾಗಿತ್ತು. ರಸ್ತೆಯ ಕೆಳಭಾಗ ಹೊಂಡವಾಗಿದ್ದು, ಇದರಿಂದ ರಸ್ತೆಗೆ ಅಪಾಯವುಂ ಟಾಗುವುದನ್ನು ತಪ್ಪಿಸಲು ಗೋಡೆ ನಿರ್ಮಿಸಲಾಗಿತ್ತು. ಇದೀಗ ಅದು ಕುಸಿದುಬಿದ್ದಿದೆ.