ಕೆಟ್ಟುಹೋದ ಬೀದಿ ದೀಪ ಕತ್ತಲಾವರಿಸಿದ ಬೆರಿಪದವು ಜಂಕ್ಷನ್
ಪೈವಳಿಕೆ: ಬೀದಿ ದೀಪ ಉರಿಯದೆ ಬೆರಿಪದವು ಜಂಕ್ಷನ್ ಕತ್ತಲಾವರಿಸಿದೆ. ಪೈವಳಿಕೆ ಪಂಚಾ ಯತ್ನ ೭ನೇ ವಾರ್ಡ್ ಬೆರಿಪದವು ಜಂಕ್ಷನ್ನಲ್ಲಿರುವ ಬೀದಿ ದೀಪ ಕೆಟ್ಟುಹೋದ ಕಾರಣ ಇಲ್ಲಿ ರಾತ್ರಿ ಊರವರು ಸಮಸ್ಯೆಗೀಡಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಪಂಚಾ ಯತ್ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ದೀಪವನ್ನು ದುರಸ್ತಿಗೊಳಿಸ ಲಾಗಿದ್ದು, ಬೆರಿಪದವಿನಲ್ಲಿ ಕೆಲವೇ ವಾರದಲ್ಲಿ ಅದು ಮತ್ತೆ ಹಾನಿಗೀಡಾಗಿ ರುವುದಾಗಿ ದೂರಲಾಗಿದೆ. ರಾತ್ರಿ ಹೊತ್ತಿನಲ್ಲಿ ಪೇಟೆಗೆ ತಲುಪುವ ಜನರು ಆತಂಕಕ್ಕೀಡಾಗಿದ್ದಾರೆ. ಅಲೆಮಾರಿ ನಾಯಿಗಳ ಕಾಟ ಅಧಿಕವಾಗಿದ್ದು, ಕತ್ತಲೆಯಲ್ಲಿ ನಡೆದು ಹೋಗಲು ಭಯಪಡುತ್ತಿದ್ದಾರೆ. ಬೀದಿ ದೀಪ ಕಳಪೆಯಾಗಿರುವುದೆ ಹಾನಿಯಾಗಲು ಕಾರಣವೆಂದು ಆರೋ ಪಿಸಲಾಗಿದೆ. ಪಂಚಾಯತ್ ಅಧಿಕೃತರು ಬೀದಿ ದೀಪ ದುರಸ್ತಿಗೊಳಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಊರವರು ಆಗ್ರಹಿಸಿದ್ದಾರೆ. ಪಂಚಾಯತ್ ಅಧಿಕಾರಿಯವರಲ್ಲಿ ದೀಪ ದುರಸ್ತಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿರುವು ದಾಗಿ ವಾರ್ಡ್ ಪ್ರತಿನಿಧಿ ಜಯಲಕ್ಷ್ಮಿ ಭಟ್ ತಿಳಿಸಿದ್ದಾರೆ.