ಕೈಕೊಟ್ಟ ಗೂಗಲ್ ಮ್ಯಾಪ್: ಸಂಚರಿಸುತ್ತಿದ್ದ ಕಾರು ತೋಡಿಗೆ ಬಿದ್ದು ಪ್ರಯಾಣಿಕರು ಪಾರು

ಕೋಟ್ಟಯಂ: ಗೂಗಲ್ ಮ್ಯಾಪ್ ನೋಡಿ ಪ್ರಯಾಣಿಸಿದ ತಂಡ ಸಂಚರಿಸುತ್ತಿದ್ದ ಕಾರು ತೋಡಿಗೆ ಬಿದ್ದಿದೆ. ಮಹಿಳೆ ಸಹಿತ ನಾಲ್ಕು ಮಂದಿಯನ್ನು ಪೊಲೀಸರು ಹಾಗೂ ಸ್ಥಳೀಯರು ಸೇರಿ ಪಾರು ಮಾಡಿದ್ದಾರೆ. ತೋಡಿನಲ್ಲಿ ಮುಳುಗಿದ ಕಾರನ್ನು ಮೇಲೆತ್ತಲು ಯತ್ನ ನಡೆಯುತ್ತಿದೆ. ಇಂದು ಮುಂಜಾನೆ 3 ಗಂಟೆಗೆ ಕುರುಪುಂದರ, ಕಡವು ಸೇತುವೆ ಸಮೀಪ ದುರಂತ ಸಂಭವಿಸಿದೆ. ಹೈದರಾಬಾದ್ ನಿವಾಸಿಗಳಾದ ಮಹಿಳೆ ಮತ್ತು ಮೂರು ಮಂದಿ ಪುರುಷರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಮೂನಾರ್‌ನಿಂದ ಆಲಪ್ಪುಳಕ್ಕೆ ತೆರಳುತ್ತಿದ್ದ ಮಧ್ಯೆ ಅಪಘಾತಕ್ಕೀಡಾಗಿದೆ. ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ತಲುಪಿದ್ದಾರೆ.

RELATED NEWS

You cannot copy contents of this page