ಕೋಟೆಕಣಿ ಬಾಲಗೋಕುಲದ ಆಶ್ರಯದಲ್ಲಿ ದೀಪಾವಳಿ ಆಚರಣೆ
ಕಾಸರಗೋಡು: ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಆಶ್ರಯದಲ್ಲಿ ದೀಪಾವಳಿ ಉತ್ಸವ ಮಕ್ಕಳ ಹಬ್ಬವಾಗಿ ಆಚರಿಸಲಾಯಿತು. ಬಾಲಗೋಕುಲ ಜಿಲ್ಲಾ ಕೋಶಾಧಿಕಾರಿ ದೇವದಾಸ್ ನುಳ್ಳಿಪ್ಪಾಡಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಬಾಲಗೋಕುಲ ತಾಲೂಕು ಅಧ್ಯಕ್ಷ ಪ್ರವೀಣ್ ಕುಮಾರ್ ಶುಭ ಹಾರೈಸಿದರು. ಪ್ರದೀಪ್ ಕುಮಾರ್ ಬೇಕಲ್, ಬಾಲಗೋಕುಲ ಅಧ್ಯಕ್ಷ ಮೋದಕ್‌ರಾಜ್ ಸೂರ್ಲು, ವರಪ್ರಸಾದ್ ಕೋಟೆಕಣಿ ಉಪಸ್ಥಿತರಿದ್ದರು. ಮಕ್ಕಳು ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಭಾಗ್ಯರಾಜ್ ನುಳ್ಳಿಪ್ಪಾಡಿ ವಂದಿಸಿದರು. ಸಿಹಿ ಹಂಚಿ ದೀಪಾವಳಿ ಸಂಭ್ರಮಿಸಲಾಯಿತು.