ಕೋಮರಾಡಿ ದೈವಸ್ಥಾನ ವಾರ್ಷಿಕೋತ್ಸವ, ನೇಮೋತ್ಸವ ಆರಂಭ
ಕಾಸರಗೋಡು: ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ಆರಂಭಗೊಂಡಿದ್ದು, ೧೧ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪೂಜೆ, ಶ್ರೀ ಕೋಮರಾಡಿ, ವಿಷ್ಣುಮೂರ್ತಿ ದೈವದ ಹಾಗೂ ಉಪ ದೈವಗಳ ಪುನರ್ ಪ್ರತಿಷ್ಠೆ, ಶುದ್ಧಿಕಲಶ, ನಾಗತಂಬಿಲ, ಮಧ್ಯಾಹ್ನ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ ಜರಗಿತು. ರಾತ್ರಿ ಭಜನೆ, ನಾಳೆ ಬೆಳಿಗ್ಗೆ ಭಂಡಾರ ಇಳಿಯುವುದು, ಗುಳಿಗನ ಕೋಲ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ೪ರಿಂದ ಮಯಿಷಂದಾಯ ದೈವದ ಕೋಲ, ರಾತ್ರಿ ೭ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ಅನ್ನ ಸಂತರ್ಪಣೆ ಬಳಿಕ ಶ್ರೀ ಅಕ್ಕೆಕುಂಞಿ ಮೂವರು ದೈವಗಳ ಕೋಲ, ಮೋಂದಿ ಕೋಲ, ೧೦.೩೦ಕ್ಕೆ ಶ್ರೀ ಕೊರತಿ ಅಮ್ಮನ ಕೋಲ, ೧೧ರಂದು ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ೯.೩೦ಕ್ಕೆ ಬಬ್ಬರ್ಯ ದೈವದ ಕೋಲ, ಮಧ್ಯಾಹ್ನ ಶ್ರೀ ಕೋಮರಾಡಿ ದೈವದ ನೇಮ, ಅನ್ನ ಸಂತರ್ಪಣೆ, ಸಂಜೆ ತುಲಾಭಾರ ಹರಕೆ ಸಮರ್ಪಣೆ ನಡೆಯಲಿದೆ.