ಖಾಲಿಸ್ತಾನಿ ಉಗ್ರರ ವಿರುದ್ಧ ಮುಂದುವರಿದ  ಬೃಹತ್ ಕಾರ್ಯಾಚರಣೆ: ದೇಶಬಿಟ್ಟು ಪರಾರಿಯಾದ ೧೯ ಮಂದಿಯ ಆಸ್ತಿ ಜಪ್ತಿಗೆ ಸಿದ್ಧತೆ

ಹೊಸದಿಲ್ಲಿ: ಖಾಲಿಸ್ತಾನಿ ಭಯೋತ್ಪಾದಕ ಮತ್ತು  ನಿಷೇಧಿತ ಪ್ರತ್ಯೇಕವಾದಿ ಸಂಘಟನೆಯಾದ ಸಿಖ್ ಫಾರ್ ಜಸ್ಟೀಸ್ ಮುಖ್ಯಸ್ಥ   ಗುರು ಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ಕ್ರಮ ಕೈಗೊಂಡ ಬೆನ್ನಲ್ಲೇ ಭಾರತ ದೇಶ ಬಿಟ್ಟು ವಿದೇಶಕ್ಕೆ  ಪರಾರಿಯಾದ ೧೯ ಮಂದಿ ಖಾಲಿಸ್ತಾನಿ ಉಗ್ರರ ವಿರುದ್ಧ ಕೇಂದ್ರ ಸರಕಾರ ಕ್ರ್ಯಾಕ್‌ಡೌನ್ ಕಾರ್ಯಾಚರಣೆಗೆ ಮುಂದಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ ಬ್ರಿಟನ್,ಅಮೇರಿಕ, ಕೆನಡಾ ಮತ್ತು ದುಬೈಯಲ್ಲಿ ನೆಲೆಸಿರುವ ೧೯ ಮಂದಿ ಖಾಲಿಸ್ತಾನಿ ಭಯೋತ್ಪಾದಕ ಪಟ್ಟಿ ತಯಾರಿಸಿದ್ದು, ಅವರ ಭಾರತದಲ್ಲಿ ರುವ ಅವರ ಆಸ್ತಿ-ಪಾಸ್ತಿ ಸೇರಿದಂತೆ  ಪಾಕಿಸ್ತಾನ ಮತ್ತು ಇತರ ದೇಶಗಳ ಆಸ್ತಿಗಳನ್ನೂ ಮುಟ್ಟುಗೋಲು ಹಾಕಲು ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ. ಭದ್ರತಾ ಏಜೆನ್ಸಿಗಳು ವರ್ಷಗಳಿಂದ ಈ ೧೯ ಮಂದಿ ಉಗ್ರರನ್ನು ಹಿಂಬಾಲಿಸುತ್ತಾ ಬಂದಿದ್ದು,  ಅವರ ವಿರುದ್ಧ ಈಗ  ಬೃಹತ್ ಮಟ್ಟದ  ಮಾಹಿತಿ ಕಲೆಹಾಕಿದೆ. ಕಠಿಣ ಭಯೋತ್ಪಾದಕ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಈ ಉಗ್ರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಈ ಭಯೋತ್ಪಾದಕರು ವಿದೇಶದಿಂದ ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದಾರೆ.

RELATED NEWS

You cannot copy contents of this page