ಗಗನಯಾತ್ರಿ ಶುಭಾಂಶು ಶುಕ್ಲ ಇಂದು ಅಪರಾಹ್ನ 3.01ಕ್ಕೆ ಭೂಮಿಗೆ ವಾಪಸ್

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಬಾಹ್ಯಾಕಾಶದಲ್ಲಿ 18 ದಿನಗಳ ತನಕ ನಡೆಸಿದ ಯಶಸ್ವಿ ಕಾರ್ಯಾಚರಣೆ ಯನ್ನು ಪೂರ್ತಿಗೊಳಿಸಿ ಇತರ ನಾಲ್ಕು ಗಗನಯಾತ್ರಿಕರೊಂದಿಗೆ ಇಂದು ಅಪರಾಹ್ನ 3.01ಕ್ಕೆ ಭೂಮಿಗೆ ವಾಪಸಾಗಲಿದ್ದಾರೆ.

ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲರ ಜತೆಗೆ ಅಮೆರಿಕದ ಪೆಗ್ಗಿ ವಿಡ್ಸನ್, ಪೋಲೆಂಡ್‌ನ ಮಿಶನ್ ಸ್ಪೆಷಲಿಸ್ಟ್ ಸ್ಲಾವೋಸ್ಟ್ ಉಜ್ಞಾನ್ಸ್ಕಿ ಮತ್ತು ಹಂಗೇರಿಯ ಗಗನಯಾತ್ರಿ ಟಿಬೋಕ್ ಕಾಪು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಸತತ 15 ದಿನಗಳ ತನಕ ಹಲವು ಸಂಶೋ ಧನೆಗಳನ್ನು ನಡೆಸಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ನಿಂದ ಡ್ರಾಗನ್ ನೌಕೆ ಮೂಲಕ ಭೂಮಿಗೆ ಪ್ರಯಾಣ ಆರಂಭಿಸಿದ್ದಾರೆ.

ಐಎಸ್‌ಎಸ್‌ನಿಂದ ಯಶಸ್ವಿಯಾಗಿ ಹೊರಟಿರುವ ಶುಭಾಂಶು ಶುಕ್ಲ ಮತ್ತು ಅಕ್ಸಿಯಂ-೪ ಸಿಬ್ಬಂದಿಗಳು ಇಂದು ಅಪರಾಹ್ನ ಭೂಮಿಗೆ ತಲುಪಲಿದ್ದಾರೆ. ಶುಕ್ಲ ಮತ್ತು ಇತರ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ಡ್ರಾಗನ್ ಬಾಹ್ಯಾಕಾಶ ನೌಕೆ ನಿನ್ನೆ ಸಂಜೆ ೪.೩೦ಕ್ಕೆ ಐಎಸ್‌ಎಸ್‌ನಿಂದ ಇಳಿದು ನಿಖರವಾಗಿ ಯೋಜಿತ ೨೨ ತಾಸುಗಳಲ್ಲಿ ಹಿಂತಿರುಗುವ ಪ್ರಯಾಣ ಆರಂಭಿಸಲಿದೆ. ಈ ಗಗನ ಯಾತ್ರಿಗಳನ್ನು ಹೊತ್ತು ಭೂಮಿಯತ್ತ ವಾಪಸಾಗುತ್ತಿರುವ ಡ್ರಾಗನ್ ಕ್ಯಾಪ್ಸೂಲ್ ನೌಕೆ ಗಂಟೆಗೆ 27 ಸಾವಿರ ಕಿ.ಮೀ ವೇಗದಲ್ಲಿ  ಸಂಚರಿಸುತ್ತಿತ್ತು. ಭೂಮಿಗೆ ಧುಮುಕುತ್ತಿರುವಂತೆಯೇ ಅದು ತೀವ್ರ ಘರ್ಷಣೆಯನ್ನು ಎದುರಿಸಲಿದೆ. ಇದರಿಂದಾಗಿ ಅದರ ಶಾಖಾ ಕವಚವು 1600 ಸಿ ವರೆಗೆ  ತಾಪಮಾನವನ್ನು ತಾಳಿಕೊಳ್ಳುವಂತೆ ಮಾಡಲಾಗಿದೆ. ಈ ಡ್ರಾಗನ್ ನೌಕೆಯು ಭೂಮಿಯ ವಾತಾವರಣವನ್ನು ಮತ್ತೆ ಪ್ರವೇಶಿಸಿ ಇಂದು ಅಪರಾಹ್ನ 3.01ಕ್ಕೆ  ಅಮೆರಿಕದ ಕ್ಯಾಲಿಫೋರ್ನಿಯ ಕರಾವಳಿಯ ಪ್ರವೇಶಿಸಲಿದೆ. ಅದನ್ನು ಸುರಕ್ಷಿತವಾಗಿಳಿಸಲು ಬೇಕಾದ ಅಗತ್ಯದ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಈಗಾಗಲೇ ಮಾಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page