ಗೃಹಿಣಿಯ ಮಾಲೆ ಅಪಹರಿಸಿ ಪರಾರಿಯಾಗಲು ಸಮುದ್ರಕ್ಕೆ ಹಾರಿದ ಆರೋಪಿ ಸೆರೆ

ತಿರುವನಂತಪುರ: ಗೃಹಿಣಿಯ ಸರ ಎಳೆದು ತೆಗೆದ ಬಳಿಕ ಪರಾರಿಯಾಗಲು ಸಮುದ್ರಕ್ಕೆ ಹಾರಿದ ಆರೋಪಿಯನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದರು. ತಿರುವನಂತಪುರ ಕಠಿನಂಕುಳಂನಲ್ಲಿ  ಘಟನೆ ನಡೆದಿದೆ. ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾದ ಸುಹೈಲ್‌ನನ್ನು ಪೊಲೀಸರು ಹಾಗೂ ಕೋಸ್ಟಲ್ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದ್ದಾರೆ.

ನಿನ್ನೆ ಸಂಜೆ 4 ಗಂಟೆ ವೇಳೆ ಬ್ರದರ್ಸ್ ಚಿಕನ್ ಅಂಗಡಿಯ ಮಾಲಕನಿಗೆ ಕತ್ತಿ ತೋರಿಸಿ ಬೆದರಿಸಿ ಈತ 5000 ರೂ. ಅಪಹರಿಸಿದ್ದನು. ಬಳಿಕ ಅಂಗಡಿ ಯಾತ ನೀಡಿದ ದೂರಿನಂತೆ ಸುಹೈಲ್‌ನನ್ನು ಹಿಡಿಯಲು ಪೊಲೀಸರು ಬೆನ್ನಟ್ಟಿದರು.

ಈ ಮಧ್ಯೆ ಪುದುಕುರಿಚ್ಚಿ ನಿವಾಸಿ ಜುಬೇರರ ಮನೆಗೆ ಈತ ಓಡಿ ನುಗ್ಗಿದ್ದಾನೆ. ಅಲ್ಲಿಂದ ಆಕೆಯ ಚಿನ್ನದ ಸರವನ್ನು ಅಪಹರಿಸಿ ಸಮುದ್ರಕ್ಕೆ ಹಾರಿದ್ದಾನೆನ್ನಲಾಗಿದೆ. ಈತನ ವಿರುದ್ಧ 7 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page