ಚಂದ್ರನ ಮೇಲೆ ಸಂಚಾರ ಆರಂಭಿಸಿದ ಪ್ರಗ್ಯಾನ್ ರೋವರ್

ಬೆಂಗಳೂರು: ಚಂದ್ರನ ಮೇಲೈ ಮೇಲೆ ನಿನ್ನೆ ಸಂಜೆ ಅತ್ಯಂತ ಸುರಕ್ಷಿv ವಾಗಿ ಇಳಿದ ವಿಕ್ರಮ್ ಲ್ಯಾಂಡರ್ ಇದೀಗ ಮುಂದಿನ ಹಂತ ಆರಂಭಿಸಿದೆ.

ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್‌ನಿಂದ ಹೊರ ಬಂದಿದ್ದು, ಚಂದ್ರನ ಮೇಲೆ ನಡಿಗೆಯನ್ನು ಆರಂ ಭಿಸಿದೆ ಎಂದು ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಕೇಂದ್ರ (ಇಸ್ರೋ) ಇಂದು ಬೆಳಿಗ್ಗೆ ಟ್ವೀಟ್ ಮಾಡಿದೆ. ಚಂದ್ರಯಾನ-೩ ಚಂದ್ರನ ಮೇಲೆ ತನ್ನ ಐತಿಹಾಸಿಕ ಲ್ಯಾಂಡಿಂಗ್ ಮಾಡಿದ ಕೆಲವೇ ಗಂಟೆಗಳ ನಂತರ ಯಶಸ್ವಿಯಾಗಿ ಮುಂದಿನ ಹಂತದ  ಕಾರ್ಯಾಚರಣೆ ಯಲ್ಲಿ ತೊಡಗಿದೆ. ಪ್ರಗ್ಯಾನ್ ರೋ ವರ್‌ನ್ನು ಯಶಸ್ವಿಯಾಗಿ ನಿಯೋಜಿಸಿದ್ದ ಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು   ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಚಂದಿರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆಗೂ  ಭಾರತ ಪಾತ್ರವಾಗಿದೆ. ಚಂದ್ರಯಾನ್ ೩ ಯಶಸ್ವಿಗೊಳಿಸಿದ ವಿಜ್ಞಾನಿಗಳನ್ನು ಮತ್ತು ಸಂಬಂಧಪಟ್ಟ ಇತರ ಸಿಬ್ಬಂದಿಗಳನ್ನು ಖುದ್ದಾಗಿ ಕಂಡು ಅವರನ್ನು ಅಭಿನಂದಿಸಲು ಈತಿಂಗಳ ೨೬ರಂದು ಪ್ರಧಾನಿ ನರೇಂದ್ರಮೋದಿ ಬೆಂಗಳೂರಿನಲ್ಲಿರುವ ಇಸ್ರೋಗೆ ಆಗಮಿಸಲಿದ್ದಾರೆ.

ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್‌ನ್ನು ಒಂದು ಚಂದ್ರನ ಒಂದು ಹಗಲಿನ ಅವಧಿವರೆಗೆ (ಅಂದರೆ ಭೂಮಿಯ ೧೪ ದಿನಗಳು) ಕಾರ್ಯವೆಸಗುವ ರೀತಿಯಲ್ಲಿ  ವಿನ್ಯಾಸಗೊಳಿಸಲಾಗಿದೆ. ಲ್ಯಾಂಡರ್ ಹಾಗೂ ಸ್ಪೇಸ್ ಏಜೆನ್ಸಿಯ ಮಿಷನ್ ಆಪರೇಷನ್ (ಎಂ.ಒ.ಎಕ್ಸ್) ನಡುವೆ ಸಂಪರ್ಕವೂ ಏರ್ಪಟ್ಟಿದೆ.   ತನ್ನ ಕ್ಯಾಮರಾದಿಂದ ಹಲವು ದೃಶ್ಯಗಳನ್ನು ಸೆರೆಹಿಡಿದು ಇಸ್ರೋ ಕೇಂದ್ರಕ್ಕೆ ಕಳುಹಿಸತೊಡಗಿದೆ.

ಚಂದ್ರಯಾನ್ ೩ ಯಶಸ್ವಿಗೊಂಡ ಬೆನ್ನಲ್ಲೇ ಸೂರ್ಯನನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯ ‘ಆದಿತ್ಯ ಎಲ್-೧’ ಕೂಡಾ ಉಡಾವಣೆಗೆ ಸಿದ್ಧವಾಗುತ್ತಿದೆ. ಸೆಪ್ಟಂಬರ್ ಮೊದಲ ವಾರದಲ್ಲಿ ಇದು ಉಡಾವಣೆಗೊಳ್ಳುವ ಸಾಧ್ಯತೆ ಇದೆ. ಚಂದ್ರಯಾನ ಯಶಸ್ವಿನ ನಂತರ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ ಮೋದಿಯವರು ಸೂರ್ಯಯಾನ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಆ ಮೂಲಕ ಇಸ್ರೋ ಮತ್ತೊಂದು ಸಾಹಸಕ್ಕೆ ಅಣಿಯಾಗುತ್ತಿದೆ.

ಆದಿತ್ಯ ಎಲ್ ೧ ಭಾರತದ ಮೊದಲ ಸೌರ ಮಿಶನ್ ಆಗಿದ್ದು, ಇದು ಸುಮಾರು ಐದು ವರ್ಷಗಳ ಕಾಲ  ಸೂರ್ಯನ ಅಧ್ಯಯನ ನಡೆಸಲಿದೆ. 

You cannot copy contents of this page