ಜಿಲ್ಲೆಯ ಕಾನೂನು, ಸುವ್ಯವಸ್ಥೆಯನ್ನು ಖಾತರಿಪಡಿಸಬೇಕು- ಬಿಜೆಪಿ
ಕಾಸರಗೋಡು: ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಖಾತರಿಪಡಿ ಸಬೇಕು ಮಾತ್ರವಲ್ಲದೆ ಮುಂದೆ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಅಗತ್ಯದ ಎಲ್ಲಾ ಪೂರ್ವಭಾವಿ ಭದ್ರತಾ ಕ್ರಮಗಳನ್ನು ಈಗಲೇ ಆರಂಭಿಸಬೇಕಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರಾವಡ ಎ. ಚಂದ್ರಶೇಖರನ್ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ. ನಿನ್ನೆ ಕಾಸರಗೋಡಿಗೆ ಆಗಮಿಸಿದ ಅವರು ಎಸ್.ಪಿ. ಕಚೇರಿಯಲ್ಲಿ ಕರೆದ ಜಿಲ್ಲೆಯ ವರಿಷ್ಠ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಈ ನಿರ್ದೇಶ ನೀಡಿದ್ದಾರೆ.