ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ೮೧ನೇ  ಸಹಾಯ ಯೋಜನೆ ಹಸ್ತಾಂತರ

ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ೮೧ನೇ ಯೋಜನೆ ಸಹಾಯ ಹಸ್ತಾಂತರ ಫಲಾನುಭವಿಗಳ ಮನೆಯಲ್ಲಿ ನಡೆಯಿತು. ಮಂಜೇಶ್ವರ ಪೊಯ್ಯಕಂಡ ನಿವಾಸಿ ರತ್ನಾಕರ, ಇವರಿಗೆ ಗಂಟಲಲ್ಲಿ ಕ್ಯಾನ್ಸರ್ ಸಮಸ್ಯೆ ಇದ್ದು ಇವರ ಕಷ್ಟಗಳನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಇವರಿಗೆ ನಿನ್ನೆ ನ್ಯಾಯವಾದಿ ನವೀನ್ ರಾಜ್ ಮೊತ್ತ ಹಸ್ತಾಂತರ ಮಾಡಿದರು. ಈ ವೇಳೆ ಸುಜಾತ ಮಂಜೇಶ್ವರ, ಪ್ರವೀಣ್ ಕನಿಲ,ಸುಕೇಶ್ ಬೆಜ್ಜ, ಅಂಕಿತ್ ಪಾವೂರು, ರೂಪೇಶ್ ಜೋಡುಕಲ್ಲು, ಪ್ರದೀಪ್ ಮೊರತ್ತಣೆ ಉಪಸ್ಥಿತರಿದ್ದರು.

You cannot copy contents of this page