ಡಿವೈಡರ್‌ಗೆ ಢಿಕ್ಕಿ ಹೊಡೆದು ಲಾರಿ ಪಲ್ಟಿ

ಕಾಸರಗೋಡು: ಪೇಟೆಯನ್ನು ಸುಂದರಗೊಳಿಸುವ ಅಂಗವಾಗಿ ಪಾಲಕುನ್ನು ಪೇಟೆಯಲ್ಲಿ ಸ್ಥಾಪಿಸಿದ್ದ ಡಿವೈಡರ್‌ಗೆ ಢಿಕ್ಕಿ ಹೊಡೆದು ಸರಕು ಲಾರಿ ಮಗುಚಿ ಬಿದ್ದಿದೆ. ಇಂದು ಮುಂಜಾನೆ ಅಪಘಾತ ಉಂಟಾಗಿದೆ. ಮಹಾರಾಷ್ಟ್ರದ ಕೋಲಾಪುರದಿಂದ ಕಣ್ಣೂರಿಗೆ ಸಕ್ಕರೆ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿದೆ. ಚಾಲಕನ ಅಶ್ರದ್ಧೆಯೇ ಅಪಘಾತಕ್ಕೆ ಕಾರಣವೆಂದು ಸಂಶಯಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಿವೈಡರ್‌ಗೆ ಢಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದಿದ್ದು, ಈ ವೇಳೆ ಅಲ್ಲಿದ್ದ ನಾಲ್ಕು ಸೋಲಾರ್ ಬೀದಿದೀಪಗಳು ಹಾನಿಗೀಡಾಗಿವೆ.  ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಬೇಕಲ ಪೊಲೀಸರು ಲಾರಿಯ ಚಾಲಕ ಇಜಾಸ್ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

You cannot copy contents of this page