ತಂದೆಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಇಡುಕ್ಕಿ: ಉಡುಂಬನ್‌ಚೋಲ ದಲ್ಲಿ ತಂದೆಯನ್ನು ತಲೆಗೆ ಬಡಿದು ಕೊಲೆಗೈದ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು 10 ವರ್ಷಗಳ ಬಳಿಕ ಪೊಲೀಸರು ಸೆರೆ ಹಿಡಿದರು. ಪಾರತ್ತೋಡ್ ಶಿಂಗಾರಿಕಂಡಂ ನಿವಾಸಿ ಆನಂದ್‌ರಾಜ್‌ನನ್ನು ಉಡುಂಬನ್ ಚೋಲ ಪೊಲೀಸರು ಸೆರೆ ಹಿಡಿದಿದ್ದಾರೆ.

2015ರಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ತಂದೆಯಾದ ಕರುಪ್ಪಯ್ಯರನ್ನು ಆನಂದ್‌ರಾಜ್ ತಲೆಗೆ ಬಡಿದು ಕೊಲೆಗೈದಿದ್ದನು. ಪ್ರಕರಣದಲ್ಲಿ ಜೈಲು ಸೇರಿದ ಆನಂದ್‌ರಾಜ್‌ಗೆ ತೊಡುಪುಳ ನ್ಯಾಯಾಲಯ ಬಳಿಕ ಜಾಮೀನು ಮಂಜೂರು ಮಾಡಿತ್ತು. ಜಾಮೀನಿನಲ್ಲಿ ಹೊರ ಬಂದ ಈತ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿ ದ್ದನು. ಈ ಮಧ್ಯೆ 2018ರಲ್ಲಿ ಊರಿಹೆ ಹಿಂತಿರುಗಿದ್ದನು. ಆ ವೇಳೆ ಓರ್ವೆ ಮಹಿಳೆಯನ್ನು ಮಾನಭಂಗಗೈದ ಬಳಿಕ ಮತ್ತೆ ತಮಿಳುನಾಡಿನಲ್ಲಿ ತಲೆಮರೆಸಿ ಕೊಂಡಿದ್ದನು. ಕಳೆದ ಫೆಬ್ರವರಿಯಲ್ಲಿ ಪಾರತ್ತೋಟಿಗೆ ತಲುಪಿದ ಆರೋಪಿ ನೆರೆಮನೆ ನಿವಾಸಿಯಾದ ಈಶ್ವರನನ್ನು ಕೊಲೆಗೈಯ್ಯಲೆತ್ನಿಸಿದ್ದನು. ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಮಧ್ಯೆ ಈತನನ್ನು ಮಧುರೈ ಕಲ್ಲುವೆಟ್‌ನಿಂದ ಸೆರೆ ಹಿಡಿಯಲಾಗಿದೆ. ಈತನನ್ನು ಪಾರತ್ತೋಟಿಗೆ ತಲುಪಿಸಿ ಹೇಳಿಕೆ ದಾಖಲಿಸಲಾಗಿದೆ.

You cannot copy contents of this page