ತಂಬಾಕು ಉತ್ಪನ್ನ ಸಹಿತ ಓರ್ವ ಸೆರೆ

ಬದಿಯಡ್ಕ: ನಿಷೇಧಿತ ತಂಬಾಕು ಉತ್ಪನ್ನ ಕೈವಶವಿರಿಸಿಕೊಂಡ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ನಿವಾಸಿ ಮೊಹಮ್ಮದ್ ಕುಂಞಿ (50) ಬಂಧಿತ ವ್ಯಕ್ತಿ. ಚಂದ್ರಂಪಾರೆ ಬಸ್ ತಂಗುದಾಣದಲ್ಲಿ ನಿಂತಿದ್ದ ಈತನ ಕೈಯಿಂದ 64 ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page