ತಿರುವನಂತಪುರ ಕ್ಷೇತ್ರದಿಂದ ಚಿನ್ನದ ಸರ ಕಳವು: ಚಿನ್ನ ಸಿಕ್ಕಿದರೂ ಕಳ್ಳರು ತೆರೆಮರೆಯಲ್ಲಿ

ತಿರುವನಂತಪುರ: ಇಲ್ಲಿನ ಶ್ರೀ  ಪದ್ಮನಾಭಸ್ವಾಮಿ ಕ್ಷೇತ್ರದ ಚಿನ್ನ ನಾಪತ್ತೆ ಯಾದ ಘಟನೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗದೆ ಪೊಲೀಸರು ತಡಕಾಡು ತ್ತಿದ್ದಾರೆ.  ಶಂಕಿತ ನೌಕರರನ್ನು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದರೂ ಸರಿಯಾದ ಪುರಾವೆ ಪತ್ತೆಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಲಭಿಸಿದ ಆಧಾರಗ ಳನ್ನಿಟ್ಟು ವರದಿ ನೀಡಲು ತನಿಖಾ ತಂಡಕ್ಕೆ ಎಡಿಜಿಪಿ ಎಚ್. ವೆಂಕಟೇಶ್ ನಿರ್ದೇಶಿ ಸಿದ್ದಾರೆ. ಗರ್ಭಗುಡಿಯ ಬಾಗಿಲಿಗೆ ಹಾಸಲು ಸಂಗ್ರಹಿಸಿಟ್ಟಿದ್ದ ಚಿನ್ನದ ತಗಡು ನಾಪತ್ತೆಯಾಗಿತ್ತು. ಈ ಬಗ್ಗೆ ಕ್ಷೇತ್ರದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ನಡೆಸಿದ ಪರಿಶೀಲನೆಯಲ್ಲಿ ಹೊಯ್ಗೆಯಲ್ಲಿ ಒಂದು ಅಡಿ ಹೊಂಡ ತೆಗೆದು ಹುಗಿದು ಹಾಕಿದಸ್ಥಿತಿಯಲ್ಲಿ ಚಿನ್ನದ ತಗಡು ಪತ್ತೆಯಾಗಿದೆ. ಇದೇ ವೇಳೆ ತನಿಖೆಯ ಹೆಸರಲ್ಲಿ ಕ್ಷೇತ್ರದ ನೌಕರರಿಗೆ ಉಪಟಳ ನೀಡುತ್ತಿರು ವುದಾಗಿ ನೌಕರರ ಸಂಘಟನೆ  (ಸಿಐಟಿಯು) ಕ್ಷೇತ್ರಾಡಳಿತ ಸಮಿತಿಗೆ ದೂರು ನೀಡಿದೆ.

You cannot copy contents of this page