ದೆಹಲಿಯಲ್ಲಿ ಕುಸಿದ 4 ಮಹಡಿ ಕಟ್ಟಡ: ಹಲವಾರು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ ಶಂಕೆ
ದೆಹಲಿ: ಇಲ್ಲಿನ ಸಿಲಾಂಪುರ್‌ನಲ್ಲಿ ನಾಲ್ಕು ಮಹಡಿ ಕಟ್ಟಡ ಕುಸಿದು ಬಿದ್ದು ಬಾರೀ ದುರಂತ ಸಂಭವಿಸಿದೆ. ಹಲವಾರು ಮಂದಿ ಕಟ್ಟಡದ ಅವಶಿಷ್ಟಗಳೆಡೆಯಲ್ಲಿ ಸಿಲುಕಿಕೊಂಡಿರುವುದಾಗಿ ಮಾಹಿತಿ ಇದೆ. ನಾಲ್ಕು ಮಂದಿಯನ್ನು ಪಾರು ಮಾಡಲಾಗಿದೆ. ಇಂದು ಬೆಳಿಗ್ಗೆ ಕಟ್ಟಡ ಕುಸಿದಿದೆ. ದೊಡ್ಡ ಶಬ್ದ ಕೇಳಿ ನೋಡಿದಾಗ ಕಟ್ಟಡ ಕುಸಿದು ಬಿದ್ದಿರುವುದು ಕಂಡು ಬಂದಿದೆ ಎಂದು ಸ್ಥಳೀಯ ನಿವಾಸಿ ಪಿಟಿಐ ಸುದ್ಧಿಮಾಧ್ಯಮಕ್ಕೆ ತಿಳಿಸಿದ್ದಾರೆ. ಕುಸಿದ ಕಟ್ಟಡದ ದೃಶ್ಯಗಳು ಬಹಿರಂಗಗೊಂಡಿವೆ. ಸ್ಥಳೀಯರು ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ ಹುಡುಕಾಟ ಆರಂಭಿಸಿದ್ದಾರೆ. ಗಾಯಗೊಂಡ ನಾಲ್ಕು ಮಂದಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಪೊಲೀಸ್, ಅಗ್ನಿಶಾಮಕದಳ ಸ್ಥಳದಲ್ಲಿದೆ.