ದೇಲಂತೊಟ್ಟು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ ಇಂದಿನಿಂದ

ಉಪ್ಪಳ: ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಆರಂಭಗೊAಡಿದ್ದು, ನಾಳೆ ಸಮಾಪ್ತಿಗೊಳ್ಳಲಿzಟೆ. ಇಂದು ಪ್ರಾತಕಾಲ ಮಹಾಪೂಜೆ, ದೀಪ ಪ್ರತಿಷ್ಠೆ ಹರಿನಾಮ ಸಂಕೀರ್ಥನೆ ನಡೆಯಿತು. ವಿವಿಧ ತಂಡಗಳಿAದ ಭಜನಾ ಕಾರ್ಯಕ್ರಮ ಸಂಜೆ ತನಕ ನಡೆಯಲಿದೆ. ಸಂಜೆ ೬ರಿಂದ ದೇವತಾ ಪ್ರಾರ್ಥನೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ, ೭ರಿಂದ ಊರ ಪ್ರತಿಭೆಗಳಿಂದ ಸಾಂಸ್ಕöÈತಿಕ ವೈಭವ ನಡೆಯಲಿದೆ. ನಾಳೆ ಪ್ರಾತಕಾಲ ೬ರಿಂದ ಗಣಪತಿ ಹೋಮ ವಿವಿಧ ವೈಧಿಕ ಕಾರ್ಯಕ್ರಮ, ೯.೩೦ರಿಂದ ಯಕ್ಷಗಾನ ತಾಳಮದ್ದಳೆ, ೧೨.೩೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫.೩೦ರಿಂದ ಚೆಂಡೆ ಮೇಳ, ೬.೩೦ರಿಂದ ೭.೩೦ರ ತನಕ ಕುಣಿತ ಭಜನೆ, ರಾತ್ರಿ ೭.೩೦ಕ್ಕೆ ಮಹಾಪೂಜೆ, ೮ರಿಂದ ಶ್ರೀ ಮಹಾವಿಷ್ಣು ದೇವರ ರಾಜಾಂಗಣ ಪ್ರವೇಶ, ಶ್ರೀ ಭೂತಬಲಿ, ಸೇವೆ ಸುತ್ತುಗಳು, ಕಟ್ಟೆ ಪೂಜೆಗಳು, ಬೆಡಿ ಮಹೋತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ ನಡೆಯಲಿದೆ.

RELATED NEWS

You cannot copy contents of this page