ಧರ್ಮ ಉಳಿಯಬೇಕಾದರೆ ದೈವ, ದೇವ ಆರಾಧನೆ, ಆಚರಣೆಗಳು ಅಗತ್ಯವಾಗಿದೆ-ವಜ್ರದೇಹಿ ಶ್ರೀ

ವರ್ಕಾಡಿ: ಧರ್ಮ ಉಳಿಯಬೇ ಕಾದರೆ ಸದಾ ದೈವ, ದೇವರ ಆರಾಧನೆ, ಆಚರಣೆಗಳು ಇರಬೇಕಾಗಿದೆ. ಅದನ್ನು ಮುಂದಿನ ತಲೆಮಾರಿಗೆ  ಮುಟ್ಟಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಜ್ರದೇಹಿ ಗುರುಪುರಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ವರ್ಕಾಡಿ ಕೊಂಡೆವೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸುಧಾಕರ ಕೊಡ್ಲಮೊಗರು ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಶಿವಕೃಪಾ ಧಾರ್ಮಿಕ ಭಾಷಣ ಮಾಡಿದರು. ರಾಮಕೃಷ್ಣ ಭಟ್ ಪೆರ್ವೋಡಿ, ನಾರಾಯಣ ಭಟ್ ಮಾಣಿಪ್ಪಾಡಿ, ನಾರಾಯಣ ನಾವಡ ಚೆಂಡೇಲು, ಮನೋಜ್ ಕುಮಾರ್ ಶೆಟ್ಟಿ ಕೆದುಂಬಾಡಿ, ಕಿಶೋರ್ ಕುಮಾರ್ ಶೆಟ್ಟಿ, ರಾಮಕೃಷ್ಣ ರೈ ಕರುಮೊಗರು ಉಪಸ್ಥಿತರಿದ್ದರು. ಸೀತಾರಾಮ ಬೇರಿಂಜ ಸ್ವಾಗತಿಸಿ, ಶಶಾಂತ್ ಮುಡಿಮಾರು  ವಂದಿಸಿ ದರು.  ಬಳಿಕ ಖ್ಯಾತ ಕಲಾವಿದರಿಂದ ಯಕ್ಷಗಾನ ಬಯಲಾಟ ಮತ್ಸ್ಯಾವತಾರ-ಭಾರ್ಗವ ವಿಜಯ’ ಪ್ರದರ್ಶನಗೊಂಡಿತು.

You cannot copy contents of this page