ನಗರದ ಲಕ್ಷ್ಮೀ ವೆಂಕಟೇಶ ರಸ್ತೆ ಶೋಚನೀಯ ನೀರು ತುಂಬಿಕೊಂಡು ಸ್ಥಳೀಯರಿಗೆ ಆತಂಕ

ಕಾಸರಗೋಡು: ಕಾಸರಗೋಡು ನಗರದ ಬ್ಯಾಂಕ್ ರಸ್ತೆಯಲ್ಲಿ ಬಿ.ಎಂ.ಎಸ್ ಕಚೇರಿ ಬಳಿಯಿಂದ ಐಎಂಎ ಹಾಲ್‌ನತ್ತ ತೆರಳುವ ಲಕ್ಷ್ಮೀ ವೆಂಕಟೇಶ ರಸ್ತೆ ಪೂರ್ಣವಾಗಿ ಹೊಂಡಗಳಿಂದ ತುಂಬಿಕೊಂಡಿದೆ.

ಸುಮಾರುಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯ ವಿವಿಧೆಡೆ ಹೊಂಡಗಳು ತುಂಬಿಕೊಂ ಡು ವಾಹನ ಸಂಚಾರಕ್ಕೆ ಸಮಸ್ಯೆ ಯಾಗಿ ಪರಿಮಿಸಿದೆ. ಮಾತ್ರವಲ್ಲದೆ ರಸ್ತೆ ಬದಿ ಚರಂಡಿ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಇದರಿಂದ ಮಳೆನೀರು ರಸ್ತೆಯಲ್ಲೇ ಕಟ್ಟಿ ನಿಂತಿರುವುದು ಹೊಂಡ ಗಳು ಸೃಷ್ಟಿಯಾಗಲು ಕಾರಣವಾಗಿದೆ. ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿರು ವುದರಿಂದ ರಸ್ತೆ ಬದಿಯ ಖಾಸಗಿ ವ್ಯಕ್ತಿಗಳ ಮನೆಯ ಆವರಣಗೋಡೆ ಕುಸಿಯುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಈ ರಸ್ತೆಗೆ ಹಲವು ವರ್ಷಗಳ ಹಿಂದೆ ಕಾಂಕ್ರೀಟ್ ನಡೆಸಲಾಗಿತ್ತು. ಅದು ವಿವಿಧೆಡೆ ಎದ್ದು ಹೋಗಿರುವುದೇ ಇದೀಗ ಶೋಚನೀಯ ಸ್ಥಿತಿಗೆ ಕಾರಣವೆಂದು ದೂರಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದೂ ನಾಗರಿಕರು ಒತ್ತಾಯಿಸುತ್ತಿದ್ದಾರೆ.

You cannot copy contents of this page