ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಲೆಗೈದ ತಾಯಿ: ಮಗುವಿನ ಮೃತದೇಹ ಪತ್ತೆ

ಪತ್ತನಂತಿಟ್ಟ: ಪತ್ತನಂತಿಟ್ಟ ಮೆಲುವೇಲಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಹಚ್ಚಿದ ಘಟನೆಯಲ್ಲಿ ನಿರ್ಣಾಯಕ ವಿವರ ಲಭಿಸಿದೆ. ಮಗುವನ್ನು ಕೊಲೆಗೈದಿರುವುದಾಗಿ 22ರ ಹರೆಯದ ತಾಯಿ ತಪ್ಪೊಪ್ಪಿಗೆ ನಡೆಸಿದ್ದಾಳೆ. ಪ್ರಿಯತಮನಿಂದ ಗರ್ಭಿಣಿಯಾಗಿದ್ದು, ಹೆರಿಗೆ ಬಳಿಕ ಮಗುವನ್ನು ಬಾಯಿ ಹಾಗೂ ಮೂಗು ಹಿಡಿದು ಕೊಲೆಗೈದಿರುವುದಾಗಿ ಒಪ್ಪಿದ್ದಾಳೆ. ಮಗು ಚಲನೆರಹಿತವಾದಾಗ ಸಮೀಪದಲ್ಲೇ ಕೊಂಡುಹೋಗಿ ಹಾಕಿರುವುದಾಗಿ ತಿಳಿಸಿದ್ದಾಳೆ.

ಹೆರಿಗೆ ವೇಳೆ ಜೊತೆಗೆ ಯಾರೂ ಕೂಡಾ ಇರಲಿಲ್ಲವೆನ್ನಲಾಗಿದೆ. ಮನೆ ಮಂದಿಗೆ ಈಕೆ ಗರ್ಭಿಣಿ ಎಂಬುದು ತಿಳಿದಿರಲಿಲ್ಲ. ನಿನ್ನೆ ಮುಂಜಾನೆ ೪ ಗಂಟೆಗೆ ಹೆರಿಗೆ ನಡೆದಿದ್ದು, ಹೊಕ್ಕುಳ ಬಳ್ಳಿಯನ್ನು ಕೊಯ್ದ ಬಳಿಕ ಮಗುವನ್ನು ಸ್ನಾನದಕೊಠಡಿಗೆ ಕೊಂಡೊಯ್ದು ಇರಿಸಿದ್ದಾಳೆ. ಬಳಿಕ ಮೃತದೇಹವನ್ನು ಕೆಸುವಿನೆಲೆಯಲ್ಲಿ ಸುತ್ತಿ ನೆರೆಮನೆಯ ಪರಿಸರದಲ್ಲಿ ಉಪೇಕ್ಷಿಸಿರುವುದಾಗಿ ಯುವತಿ ಪೊಲೀಸರಲ್ಲಿ ತಿಳಿಸಿದ್ದಾಳೆ.

ಹೆರಿಗೆ ಬಳಿಕ ಅಪರಿಮಿತ ರಕ್ತಸ್ರಾವದ ಹಿನ್ನೆಲೆಯಲ್ಲಿ ಚೆಂಗನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಲುಪಿ ದಾಗ ವಿಷಯ ಬಹಿರಂಗಗೊಂಡಿದೆ. ಹೆರಿಗೆಯಾದ ಮಗುವಿನ ಬಗ್ಗೆ ಕೇಳಿದಾಗ ಈಕೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಳಿಕ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಪೊಲೀಸರು ತಪಾಸಣೆ ನಡೆಸಿದ್ದು, ಮಗುವಿನ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.

RELATED NEWS

You cannot copy contents of this page