ನಿಗೂಢ ಸ್ಥಿತಿಯಲ್ಲಿ ಹೋಟೆಲ್ ಕೊಠಡಿಯಲ್ಲಿ  ಯುವಕನ ಮೃತದೇಹ ಪತ್ತೆ

ಹೊಸದುರ್ಗ: ಹೋಟೆಲ್‌ನ ಕೊಠಡಿಯಲ್ಲಿ ಯುವಕ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಡಿಕೈ ಮೋಕೌಟ್ ನಿವಾಸಿ ಹಾಗೂ ಸೂರ್ಯವಂಶಿ ಹೋಟೆಲ್‌ನ ರಿಸೆಪ್ಶನಿಸ್ಟ್ ಅರೀಕರ ಅನೂಪ್ (೩೩)ರ ಮೃತದೇಹ ನಿನ್ನೆ ರಾತ್ರಿ ಹೋಟೆಲ್ ಕೊಠಡಿಯಲ್ಲಿ ಕಂಡು ಬಂದಿದೆ. ತಲೆಯಲ್ಲಿ ಆಳವಾದ ಗಾಯ ಕಂಡು ಬಂದಿದೆ. ರಕ್ತ ವಾಂತಿ ಮಾಡಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡುಹೋಗಲಾಗಿದ್ದು, ಪೋಸ್ಟ್ ಮಾರ್ಟಂ ಬಳಿಕ ಮರಣ ಕಾರಣ ತಿಳಿದು ಬರಬಹುದೆಂದು ಪೊಲೀಸಧಿ ಕಾರಿಗಳು ತಿಳಿಸಿದ್ದಾರೆ. ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ತಲುಪಿ ಮಾಹಿತಿ ಸಂಗ್ರಹಿಸಿದ್ದಾರೆ. ಮೃತ ಯುವಕ ತಾಯಿ ಓಮನ, ತಂದೆ ಬಾಲಕೃಷ್ಣನ್, ಸಹೋದರಿ ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page