ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ ದೌರ್ಜನ್ಯ: ಆರೋಪಿಗಾಗಿ ತೀವ್ರ ಶೋಧ: ತನಿಖೆಗೆ ಪ್ರತ್ಯೇಕ ತಂಡ

ಹೊಸದುರ್ಗ: ಮನೆಯಲ್ಲಿ ನಿದ್ರಿಸುತ್ತಿದ್ದ 9ರ ಹರೆಯದ ಬಾಲಕಿಯನ್ನು ಮುಂಜಾನೆ ಹೊತ್ತಿನಲ್ಲಿ ಅಪಹರಿಸಿ  ಕೊಂಡೊಯ್ದು ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ತನಿಖೆಗಾಗಿ ಪ್ರತ್ಯೇಕ ತಂಡವನ್ನು ರೂಪೀಕರಿಸಾಗಿದೆ.  ಡಿವೈಎಸ್ಪಿ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು ನಿನ್ನೆ ಘಟನೆ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಲಾಗಿದೆ. ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಲುಪಿ ತನಿಖೆಯ ಅವಲೋಕನ ನಡೆಸುವರು. 

ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಮುಂಜಾನೆ ಈ ಘಟನೆ ನಡೆದಿದೆ. ಮುಂಜಾನೆ ೨.೩೦ರ ವೇಳೆ ಅಜ್ಜ ಹಾಲು ಕರೆಯಲೆಂದು ಮನೆಯ ಮುಂಭಾಗದ ಬಾಗಿಲು ತೆರೆದು ಹೊರಗೆ ಹೋಗಿದ್ದ ಸಂದರ್ಭಲ್ಲಿ ದುಷ್ಕರ್ಮಿ ಮನೆಗೆ ನುಗ್ಗಿ ಬಾಲಕಿಯನ್ನು ಅಪಹರಿಸಿ ಅರ್ಧ ಕಿಲೋ ಮೀಟರ್ ದೂರಕ್ಕೆ ಕೊಂಡೊಯ್ದು ದೌರ್ಜನ್ಯ ನಡೆಸಲಾಗಿದ. ಅಲ್ಲದೆ ಬಾಲಕಿಯ ದೇಹದಲ್ಲಿ ಚಿನ್ನಾಭರಣ ದರೋಡೆಗೈದು ಬಾಲಕಿಯನ್ನು ಉಪೇಕ್ಷಿಸಿ ದುಷ್ಕರ್ಮಿ ಪರಾರಿಯಾಗಿದ್ದನು. ಆರೋಪಿ ಮಲೆಯಾಳ ಭಾಷೆಯಲ್ಲಿ ಮಾತನಾಡಿದ್ದು, ಮಾಸ್ಕ್ ಧರಿಸಿದ್ದನೆನ್ನಲಾಗಿದೆ. ತನಿಖೆ ಯಂಗವಾಗಿ ಸಂಶಯಾಸ್ಪದ ಕೆಲವು ವ್ಯಕ್ತಿಗಳನ್ನು ಪೊಲೀಸರು ವಿಚಾರಿಸಿದ್ದಾರೆ. ಆರೋಪಿಯನ್ನು ಶೀಘ್ರ ಬಂಧಿಸಲು ಸಾಧ್ಯತೆಯಿದೆ ಯೆಂಬ ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.

RELATED NEWS

You cannot copy contents of this page