ಪಾಂಡಿ ಶಾಲೆಯಲ್ಲಿ ಭೋಜನಶಾಲೆ, ಕುಡಿಯುವ ನೀರು ಘಟಕ ಉದ್ಘಾಟನೆ

ಪಾಂಡಿ: ಸರಕಾರಿ ಪ್ರೌಢಶಾಲೆ ಯಲ್ಲಿ ಜಿಲ್ಲಾ ಪಂ.ನ ಸಹಾಯ ದೊಂದಿಗೆ ಹಳೆಯ ಕಟ್ಟಡವನ್ನು ನವೀಕರಿಸಿದ ಭೋಜನ ಶಾಲೆ ಮತ್ತು ಶುದ್ಧವಾದ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಎಸ್.ಎನ್ ಉದ್ಘಾಟಿಸಿದರು. ದೇಲಂಪಾಡಿ ಪಂಚಾಯತ್ ಅಧ್ಯಕ್ಷೆ ಎ.ಪಿ ಉಷಾ ಅಧ್ಯಕ್ಷತೆ ವಹಿಸಿದರು.
ದೇಲಂಪಾಡಿ ಪಂಚಾಯತ್ ಸದಸ್ಯ ಟಿ.ಕೆ ದಾಮೋದರನ್ ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ, ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ಯಾಮಲ ಬಿ, ಎಸ್‌ಎಂಸಿ ಅಧ್ಯಕ್ಷ ದಿವಾಕರನ್, ಸ್ಟಾಫ್ ಕಾರ್ಯದರ್ಶಿ ಆನಂದ ಎಸ್. ಉಪಸ್ಥಿತರಿದ್ದರು. ಪ್ರಭಾರ ಪ್ರಾಂಶುಪಾಲ ಮುರಳೀಧರನ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ದಿವ್ಯಗಂಗಾ ಪಿ. ವಂದಿಸಿದರು. ಅಧ್ಯಾಪಕ ಅನೀಶ್ ಟಿ.ಆರ್ ನಿರೂಪಿಸಿದರು.

You cannot copy contents of this page