ಪಿಕಪ್ ಢಿಕ್ಕಿ: ಮುರಿದುಬಿದ್ದ ಹೊಸಂಗಡಿ ರೈಲ್ವೇ ಗೇಟ್

 ಮಂಜೇಶ್ವರ: ಮರ ಮತ್ತಿತರ ವಸ್ತುಗಳನ್ನು ಹೇರಿ ಸಾಗುತ್ತಿದ್ದ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಹೊಸಂಗಡಿ ರೈಲ್ವೇ ಗೇಟ್ ಮುರಿದುಬಿದ್ದಿದೆ. ಇದರಿಂದ ಇಂದು ಈ ಮೂಲಕ  ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇಂದುಬೆಳಿಗ್ಗೆ ರೈಲು  ಹಾದು ಹೋಗಲು ಗೇಟ್ ಮುಚ್ಚುತ್ತಿದ್ದಂತೆ ಹೊಸಂಗಡಿ ಭಾಗಕ್ಕೆ ತೆರಳುತ್ತಿದ್ದ ಪಿಕಪ್ ವಾಹನ ತಲುಪಿದೆ. ವಾಹನ ಮುಂದೆ ಸಾಗುವಷ್ಟರಲ್ಲಿ ಅದರ ಮೇಲೆ ಹೇರಿದ್ದ ಮರ ಮತ್ತಿತರ ಸಾಮಗ್ರಿ ಗಳು ಗೇಟ್‌ಗೆ ಬಡಿದಿದೆ. ಇದರಿಂದ ಗೇಟ್ ಮುರಿದು ಬಿತ್ತೆನ್ನಲಾಗಿದೆ. ಘಟನೆಯಿಂದ  ಈ ರೈಲ್ವೇ ಗೇಟ್ ಮೂಲಕ ಸಂಚರಿಸಬೇಕಾದ ವಾಹನ ಗಳು ಬೇರೆ ರಸ್ತೆಯಲ್ಲಿ ಸಂಚರಿಸಬೇಕಾಗಿ ಬಂತು. ಘಟನೆ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ತಲುಪಿಸಿದ್ದಾರೆ.

You cannot copy contents of this page