ಪೈವಳಿಕೆಯ ಅಪಾರ್ಟ್‌ಮೆಂಟ್‌ಗಳಿಗೆ ಎನ್‌ಫೋರ್ಸ್‌ಮೆಂಟ್ ದಂಡ

ಪೈವಳಿಕೆ: ಪೇಟೆಯ ಅಪಾರ್ಟ್‌ಮೆಂಟ್‌ಗಳು ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಎಸೆದಿರುವ ಬಗ್ಗೆ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ದಂಡ ಹೇರಿದೆ. 5000 ರೂ. ನಂತೆ ದಂಡ ಹೇರಲಾಗಿದೆ. ಪೈವಳಿಕೆಯ ಹೋಟೆಲ್ ತ್ಯಾಜ್ಯ ಸಂಸ್ಕರಣೆ ಲೋಪದ ಹೆಸರಲ್ಲಿ 25000 ರೂ. ದಂಡ ಹೇರಲಾಗಿದೆ.

ಚೀಮೇನಿಯ ವಿವಿಧ ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ನಡೆಸಿದ ತಪಾಸಣೆಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸಿದ ಸ್ಥಿತಿಯಲ್ಲಿ ರಾಶಿ ಹಾಕಿರುವುದಕ್ಕೆ 10,000 ರೂ. ದಂಡವನ್ನು ಸ್ಕ್ವಾಡ್ ಹೇರಿದೆ. ತಂಡದಲ್ಲಿ ಲೀಡರ್ ಮುಹಮ್ಮದ್ ಮದನಿ, ಎಂ.ಟಿ.ಪಿ ರಿಯಾಸ್, ಪಿ.ವಿ. ಅಂಜುಕುಮಾರ್, ಸುಧಾಕರನ್, ಇ.ಕೆ. ಫಾಸಿಲ್ ಭಾಗವಹಿಸಿದರು.

You cannot copy contents of this page