ಪೈವಳಿಕೆಯಲ್ಲಿ ಮಳೆಯಿಂದ ಮನೆಗೆ ಹಾನಿ
ಪೈವಳಿಕೆ: ಪೈವಳಿಕೆ ಪಂಚಾಯತ್‌ನ 18ನೇ ವಾರ್ಡ್‌ನ ಮರಿಕೆ ಎಂಬಲ್ಲಿರುವ ಜೆಸಿಂತಾ ಡಿಸೋಜಾ ಎಂಬವರ ಹೆಂಚಿನ ಮನೆಯ ಹಿಂಬದಿಯಲ್ಲಿರುವ ಮಣ್ಣಿನ ಗೋಡೆ ಮೊನ್ನೆ ಸಂಜೆ ಗಾಳಿ ಮಳೆಗೆ ಮುರಿದು ಬಿದ್ದು ಮನೆಗೆ ಹಾನಿಯಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪಂಚಾಯತ್ ಸದಸ್ಯೆ ಸುನಿತಾ ವಲ್ಟಿ ಡಿಸೋಜಾ, ಪೈವಳಿಕೆ ವಿಲೇಜ್ ಆಫೀಸರ್ ಮೊಯ್ದೀನ್ ಕುಂಞಿ, ವಿಲೇಜ್ ಫೀಲ್ಡ್ ಅಸಿಸ್ಟೆಂಟ್ ಬೈಜು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.