ಪೋಕ್ಸೋ ಪ್ರಕರಣ: ಆರೋಪಿಗೆ 5 ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಪ್ರಾಯಪೂರ್ತಿಯಾಗದ ಬಾಲಕಿಗೆ ಲೈಂಗಿಕ ಚೇಷ್ಠೆ ತೋರಿಸಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯ ೫ ವರ್ಷ ಕಠಿಣ ಸಜೆ, 11,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ನೋರ್ತ್ ಕೋಟಚ್ಚೇರಿ ತುಳುಚ್ಚೇರಿಯ ಜಿ.ಕೆ. ಹೌಸ್‌ನ ಟಿ. ಅಶೋಕ್ ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 6 ತಿಂಗಳು ಮತ್ತು ಎರಡು ವಾರಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2023 ಸೆ.9ರಂದು ಹೊಸದುರ್ಗ ಹಳೆ ಬಸ್ ನಿಲ್ದಾಣ ಸಮೀಪ ಕಾಸರಗೋಡು ಭಾಗದತ್ತ ಸಾಗುವ ಬಸ್ ನಿಲುಗಡೆಗೊಳಿಸುವ ಸ್ಥಳದಲ್ಲಿ ನಡೆದು ಹೋಗುತ್ತಿದ್ದ ಬಾಲಕಿಗೆ ಲೈಂಗಿಕ ಚೇಷ್ಠೆ ನೀಡಿದ ಆರೋಪದಂತೆ ಆರೋಪಿ ವಿರುದ್ಧ ಹೊಸದುರ್ಗ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ.