ಬದಿಯಡ್ಕದಲ್ಲಿ ಮಟ್ಕಾ ಕೇಂದ್ರಕ್ಕೆ ಪೊಲೀಸರ ದಾಳಿ: ಓರ್ವ ಸೆರೆ; 25,700 ರೂ, ಕಾರು ವಶ
ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಮಟ್ಕಾ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿ ದ್ದಾರೆ. ಅಲ್ಲಿಂದ 25,700 ರೂಪಾಯಿ ಹಾಗೂ ಒಂದು ಕಾರನ್ನು ವಶಪಡಿಸಲಾಗಿದೆ.
ಬದಿಯಡ್ಕ ಬಸ್ ನಿಲ್ದಾಣ ಬಳಿ ಮಟ್ಕಾ ದಂಧೆ ನಡೆಸುತ್ತಿದ್ದ ಸೂರಂಬೈಲು ನಿವಾಸಿ ರಾಜೇಶ್ (39) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಸ್ಪೆಷಲ್ ಬ್ರಾಂಚ್ ನೀಡಿದ ಮಾಹಿತಿ ಮೇರೆಗೆ ನಿನ್ನೆ ರಾತ್ರಿ 7.15ರ ವೇಳೆ ಬದಿಯಡ್ಕ ಎಸ್‌ಐ ಸುಮೇಶ್‌ಬಾಬು, ಪ್ರೊಬೆಷನರಿ ಎಸ್ ಐ ರೂಪೇಶ್, ಚಾಲಕ ಅನೀಶ್ ಎಂಬವರು ಮಟ್ಕಾ ಕೇಂದ್ರಕ್ಕೆ ದಾಳಿ ನಡೆಸಿದ್ದಾರೆ. ಕುಂಬಳೆ ಸಹಿತ ವಿವಿಧೆಡೆ ನಡೆಯುವ ಮಟ್ಕಾ ದಂಧೆಯ ಕೇಂದ್ರ ಬದಿಯಡ್ಕದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.