ಬದಿಯಡ್ಕದಿಂದ ನಾಪತ್ತೆಯಾಗಿ ಮರಳಿ ಬಂದುಪ್ರಿಯತಮ ಆಶಿಕ್‌ಅಲಿಯೊಂದಿಗೆ ತೆರಳಿದ ಪ್ರತೀಕ್ಷ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಪ್ರತೀಕ್ಷ (19) ಎಂಬಾಕೆ ಮರಳಿ ಬಂದಿದ್ದು, ಆಕೆಯನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಆಕೆ ಪ್ರಿಯತಮನಾದ ಕಾಞಂಗಾಡ್ ನಿವಾಸಿ ಆಶಿಕ್ ಅಲಿಯೊಂದಿಗೆ ತೆರಳಿದಳು.  ಕಳೆದ ಮಂಗಳವಾರದಿಂದ ಪ್ರತೀಕ್ಷ ನಾಪತ್ತೆಯಾಗಿದ್ದಳು. ಅಂದು ಬೆಳಿಗ್ಗೆ 10 ಗಂಟೆಗೆ ಸ್ನೇಹಿತೆಯ ಮನೆಗೆ ತೆರಳುವುದಾಗಿ ತಿಳಿಸಿ ಆಕೆ ಮನೆಯಿಂದ ಹೊರಟಿದ್ದಳು. ಸಂಜೆಯಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ತಾಯಿಯ ಸಹೋದರ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಪ್ರತೀಕ್ಷ ಹಾಗೂ ಪ್ರಿಯತಮ ಆಶಿಕ್ ಅಲಿ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದರು. ಇದರಂತೆ ಬದಿಯಡ್ಕ ಪೊಲೀಸರು ಕಾಸರಗೋಡಿಗೆ ತಲುಪಿ ಯುವತಿಯ ಹೇಳಿಕೆ ದಾಖಲಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಈ ವೇಳೆ ಸ್ವಂತ ಇಷ್ಟ ಪ್ರಕಾರ ತೆರಳಲು ನ್ಯಾಯಾಲಯ ಅನುಮತಿ ನೀಡಿತ್ತು.  ಇದೇ ವೇಳೆತಾಯಿ ಹಾಗೂ ಸಹೋದರ ನ್ಯಾಯಾಲಯಕ್ಕೆ ತಲುಪಿದ್ದರು. ಅವರೊಂದಿಗೆ ಪ್ರತೀಕ್ಷ ಮಾತನಾಡಿದ ಬಳಿಕ ತಾನು ಆಶಿಕ್ ಅಲಿಯೊಂದಿಗೆ ತೆರಳುವುದಾಗಿ ತಿಳಿಸಿ ಆತನೊಂದಿಗೆ ತೆರಳಿದ್ದಾಳೆ.

RELATED NEWS

You cannot copy contents of this page