ಬಸ್ ಕಾರ್ಮಿಕರಿಗೆ, ಮಾಲಕರಿಗೆ ತಿಳುವಳಿಕಾ ತರಗತಿ
ಕಾಸರಗೋಡು: ಕಾಸರಗೋಡು ತಾಲೂಕಿನ ಬಸ್ ಕಾರ್ಮಿಕರಿಗೆ, ಮಾಲಕರಿಗೆ ಮಾಹಿತಿ ತಿಳುವಳಿಕಾ ತರಗತಿ ನಡೆಸಲಾಯಿತು. ಬಸ್ ಮುಷ್ಕರದ ದಿನದಂದು ಮಾಲಕರು ಹಾಗೂ ಕಾರ್ಮಿಕರನ್ನು ಒಟ್ಟುಗೂಡಿಸಿ ಮೋಟಾರು ವಾಹನ ಇಲಾಖೆ, ಪೊಲೀಸ್, ಟ್ರೋಮಾ ಕೇರ್‌ಸೊಸೈಟಿ, ಬಸ್ ಮಾಲಕರ ಸಂಘಟನೆ ಮುಖಂಡರು, ಕಾರ್ಮಿಕ ಸಂಘಟನೆಗಳ ಮುಖಂಡರು ಮೊದಲಾದವರು ಭಾಗವಹಿಸಿದರು. ಹೊಸ ಬಸ್ ನಿಲ್ದಾಣದ ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ತರಗತಿ ನಡೆದಿದ್ದು, ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್ ರೋಷನ್, ಲಯನ್ಸ್ ಕ್ಲಬ್ ಅಧ್ಯಕ್ಷ ವಿ. ವೇಣುಗೋಪಾಲ್ ತರಗತಿ ನಡೆಸಿದರು. ಪೊಲೀಸ್ ಎಡಿಶನಲ್ ಎಸ್‌ಪಿ ದೇವದಾಸ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಬಸ್ ಆಪರೇಟರ್ಸ್ ಫೆಡರೇಶನ್ ಕಾರ್ಯದರ್ಶಿ ಸಿ.ಎ. ಮುಹಮ್ಮದ್ ಕುಂಞಿ ಸ್ವಾಗತಿಸಿದರು. ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಕೆ. ಗಿರೀಶ್ ಅಧ್ಯಕ್ಷತೆ ವಹಿಸಿದರು. ಆರ್‌ಟಿಒ ರಾಜೇಶ್, ಗಿರಿಕೃಷ್ಣನ್, ದಿನೇಶನ್, ಎನ್. ಬಾಲಕೃಷ್ಣನ್, ಕಾರ್ತಿಕ್‌ರಾಜ್, ಶಂಕರ್ ನಾಯ್ಕ್ ಭಾಗವಹಿಸಿದರು.