ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯಗೈದ ಆರೋಪಿ ಆಂಧ್ರಪ್ರದೇಶದಿಂದ ಸೆರೆ

ಕಾಸರಗೋಡು: ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನಿದ್ರಿಸುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಅಪಹರಿಸಿ ಕೊಂಡೊಯ್ದು ಲೈಂಗಿಕ ದೌರ್ಜನ್ಯ ಗೈದ ಆರೋಪಿಯನ್ನು ಆಂಧ್ರಪ್ರದೇಶದಿಂದ ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ.

ಕರ್ನಾಟಕದ ಕೊಡಗು ನಾಪೊಕ್ಲು ನಿವಾಸಿ ಸಲೀಂ (39) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ಇಂದು ಸಂಜೆಯೊಳಗೆ ಕಾಸರಗೋಡಿಗೆ ತಲುಪಿಸಲಾಗುವುದೆಂದೂ ಪೊಲೀಸರು ತಿಳಿಸಿದ್ದಾರೆ.

ಈ ತಿಂಗಳ 15ರಂದು ಘಟನೆ ನಡೆದಿತ್ತು. ಅಂದು ಮುಂಜಾನೆ 2.30ರ ವೇಳೆ ಮನೆಗೆ ನುಗ್ಗಿದ ಆರೋಪಿ ಬಾಲಕಿಯನ್ನು 500 ಮೀಟರ್ ದೂರದ ಬಯಲಿಗೆ ಕೊಂಡೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯಗೈದಿ ದ್ದನು. ಬಳಿಕ ಆಕೆಯ ಬೆಂಡೋಲೆಗಳನ್ನು ಅಪಹರಿಸಿ ಆರೋಪಿ ಪರಾರಿಯಾಗಿದ್ದನು. ಆರೋಪಿಯ ಕೈಯಿಂದ ಪಾರಾದ ಬಾಲಕಿ ಸಮೀಪದ ಮನೆಗೆ ತಲುಪಿ ವಿಷಯ ತಿಳಿದಾಗಲೇ ಘಟನೆ ಬಹಿರಂಗಗೊಂಡಿತ್ತು. ಇದರಂತೆ ಕೇಸು ದಾಖಲಿಸಿ  ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಆರೋಪಿಯ ಪತ್ತೆಗಾಗಿ ಪ್ರತ್ಯೇಕ ತನಿಖಾ ತಂಡವನ್ನು ನೇಮಿಸಲಾಗಿತ್ತು. ಈ ತಂಡ ಕೊಡಗು ಸಹಿತ ವಿವಿಧೆಡೆಗಳಿಗೆ ತನಿಖೆ ವಿಸ್ತರಿಸಿತ್ತು. ಇದೀಗ ಆರೋಪಿಯನ್ನು ಆಂಧ್ರಪ್ರದೇಶದಿಂದ ಬಂಧಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.

RELATED NEWS

You cannot copy contents of this page