ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಆರೋಪಿ ದೋಷಿ
ಕಾಸರಗೋಡು: ಹದಿನೈದು ವರ್ಷದ ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾ ಲಯ (೧)ರಲ್ಲಿ ನಡೆದ ವಿಚಾರಣೆ ಯಲ್ಲಿ ಸಾಬೀತುಗೊಂಡಿದ್ದು, ಆದ್ದರಿಂದ ಆತ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣದ ಘೋಷಣೆಯನ್ನು ನ್ಯಾಯಾಲಯ ಇಂದು ನಡೆಸಲಿದೆ.
ಮೊಗ್ರಾಲ್ ಪುತ್ತೂರು ಕಂಬಾರ್ ನಿವಾಸಿ ಲೋಕೇಶ್ (೪೭) ಈ ಪ್ರಕರಣದ ಆರೋಪಿಯಾಗಿದ್ದು, ಆತ ತಪ್ಪಿತಸ್ಥನೆಂದು ತೀರ್ಪಿನಲ್ಲಿ ನ್ಯಾಯಾ ಲಯ ತಿಳಿಸಿದೆ.
೨೦೧೮ ಫೆಬ್ರವರಿ ೨೫ರಂದು ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ನಿವಾಸಿಯಾಗಿರುವ ಬಾಲಕಿ ಮತ್ತು ಆಕೆಯ ತಂದೆಯನ್ನು ಭೂತಾರಾಧನೆ ಕಾರ್ಯಕ್ರಮ ನೋಡಲೆಂದು ಆರೋಪಿ ಕರೆದೊಯ್ದು ನಂತರ ಬಾಲಕಿಯ ತಂದೆ ಅಲ್ಲಿಂದ ಮನೆಗೆ ಹಿಂತಿರುಗಿದ ಬಳಿಕ ಮುಂಜಾನೆ ೨ ಗಂಟೆಗೆ ಆ ಬಾಲ ಕಿಯನ್ನು ಆರೋಪಿ ಬೈಕ್‌ನಲ್ಲಿ ಕರೆದು ಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆತನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿ ಸಿಕೊಂಡಿದ್ದರು. ಪ್ರೋಸಿಕ್ಯೂಶನ್ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರೋಸಿ ಕ್ಯೂಟರ್ ಪಿ.ಆರ್. ಪ್ರಕಾಶ್ ಅಮ್ಮಣ್ಣಾಯ ನ್ಯಾಯಾಲಯದಲ್ಲಿ ವಾದಿಸಿದ್ದರು.