ಬಿ.ಎಂ. ರಾಮಯ್ಯ ಶೆಟ್ಟಿ ಸಂಸ್ಮರಣೆ ವಾರ್ಷಿಕ
ಉಪ್ಪಳ: ಸಿಪಿಎಂ ಮಾಜಿ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ, ಮಂಜೇಶ್ವರ ಏರಿಯಾ ಕಾರ್ಯದರ್ಶಿಯಾಗಿ ಬಿ.ಎಂ. ರಾಮಯ್ಯ ಶೆಟ್ಟಿ ಅವರ ಸಂಸ್ಮರÀಣೆ ವಾರ್ಷಿಕ ದಿನಾಚರಣೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ನಡೆಯಿತು. ಬೇಕೂರು ಸುಭಾಷ್ ನಗರದಿಂದ ಬಹುಜನ ಮೆರವಣಿಗೆ ನಡೆಯಿತು.
ಜೋಡುಕಲ್ಲು ನಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಿಪಿಎಂ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕೆ.ವಿ ಕುಂಞರಾಮನ್ ಉದ್ಘಾಟಿಸಿದರು. ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿ.ವಿ ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ನಾಸರ್ ಕೊಳಾಯಿ ಪ್ರಧಾನ ಭಾಷಣ ಮಾಡಿದರು. ಸಿಪಿಎಂ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕೆ ಆರ್ ಜಯಾನಂದ, ಏರಿಯಾ ಸಮಿತಿ ಸದಸ್ಯ ಬೇಬಿ ಶೆಟ್ಟಿ, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ, ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಮಾತನಾಡಿದರು. ಸಿಪಿಎಂ ಹಿರಿಯ ಮುಂದಾಳುಗಳನ್ನು ಗೌರವಿ ಸಲಾಯಿತು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಝಾಕ್ ಚಿಪ್ಪಾರು ಸ್ವಾಗತಿಸಿದರು. ವಿನಯ್ ಕುಮಾರ್ ಬಾಯಾರು ವಂದಿಸಿದರು.