ಬಿಜೆಪಿ ಕುಂಬಳೆ ಮಂಡಲ ಕಚೇರಿಯಲ್ಲಿ ವಾಜಪೇಯಿ ಪುಣ್ಯಸ್ಮರಣೆ
ಬಿಜೆಪಿ ಕುಂಬಳೆ ಮಂಡಲ ಆಫೀಸಿನಲ್ಲಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಯವರ ೯೯ನೇ ವಾರ್ಷಿಕ ಪುಣ್ಯ ಸ್ಮರಣೆ ಯನ್ನು ಅವರ ಜನ್ಮ ದಿನದಂದು ಆಚರಿಸಲÁಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೆ ಸತೀಶ್ ಚಂದ್ರ ಭಂಡಾರಿ ಪುಷ್ಪರ್ಚನೆ ಮಾಡಿದರು. ರಾಜ್ಯ ಪರಿಷತ್ ಸದಸ್ಯ ವಿ. ರವಿಂದ್ರನ್ ಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆ ಮಾತನಾಡಿದರು. ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಮುರಳಿಧರ ಯÁದವ್, ಉದ್ಯಮಿ ವಿಕ್ರಮ್ ಪೈ, ಗೋಪಾಲಕೃಷ್ಣ ಪೂಜಾರಿ ಕಂಚಿಕಟ್ಟೆ, ಪುತ್ತಿಗೆ ಪಂಚಾಯತ್ ಸದಸ್ಯ ಜನಾರ್ಧನ ಕಣ್ಣೂರು, ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಸುಜಿತ್ ರೈ ಸ್ವಾಗತಿಸಿ, ಬಿಜೆಪಿ ಪಂಚಾಯತ್ ಸಮಿತಿಯ ಜತೆ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ ವಂದಿಸಿದರು