ಅಡ್ಕತ್ತಬೈಲು ಶ್ರೀ ಬ್ರಹ್ಮಬೈದರ್ಕಳ ಗರಡಿ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಅಡ್ಕತ್ತಬೈಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಇಲ್ಲಿನ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವ ಮಾರ್ಚ್ 31ರಿಂದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ, ಉತ್ಸವ ಸಮಿತಿ ರೂಪೀಕರಣ ಕ್ಷೇತ್ರ ಸನ್ನಿಧಿಯಲ್ಲಿ ಜರಗಿತು. ನಗರಸಭೆಯ 4ನೇ ವಾರ್ಡ್ ಸದಸ್ಯ ಗುರುಪ್ರಸಾದ್ 5ನೇ ವಾರ್ಡ್ ಸದಸ್ಯ ಹರೀಶ್ ಕೆ.ಆರ್. ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಉದ್ಘಾಟಿಸಿದರು. ಉತ್ಸವ ಸಮಿತಿ ರೂಪೀಕರಿಸಲಾಯಿತು. ರಕ್ಷಾಧಿಕಾರಿಯಾಗಿ ವಿಷ್ಣುಪ್ರಕಾಶ್ ತಂತ್ರಿ, ಗೌರವಾಧ್ಯಕ್ಷರಾಗಿ ಭಾಸ್ಕರ ಸುವರ್ಣ ಗರಡಿಮನೆ, ನೂತನ ಅಧ್ಯಕ್ಷರಾಗಿ ಎ. ಪ್ರೇಮ್‌ಜಿತ್, ಉಪಾಧ್ಯಕ್ಷರಾಗಿ ಮೋಹನ್‌ದಾಸ್, ಚಂದ್ರಕಲಾ, ಪ್ರಧಾನ ಕಾರ್ಯದರ್ಶಿಯಾಗಿ ಹರಿಕಾಂತ್ ಕೆ., ಜತೆ ಕಾರ್ಯದರ್ಶಿಯಾಗಿ ಕಾರ್ತಿಕ್, ಕೋಶಾಧಿಕಾರಿಯಾಗಿ ದಯಾನಂದ ಪೂಜಾರಿ, ಸದಸ್ಯರಾಗಿ ರಘು ಮೀಪುಗುರಿ, ಗುರುಪ್ರಸಾದ್ ಪ್ರಭು, ಕಮಲಾಕ್ಷ ಸುವರ್ಣ, ಶಿವ ಕೆ, ಪ್ರಚಾರ ಸಮಿತಿಗೆ ಪುರುಷೋತ್ತಮ ನಾಯ್ಕ್, ದೀಕ್ಷಿತ್, ಕಾರ್ತಿಕ್ ಆಯ್ಕೆಯಾದರು. ಇತರ ಉಪ ಸಮಿತಿಗಳನ್ನು ರಚಿಸಲಾಯಿತು.

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮೊಕ್ತೇಸರ ಅಚ್ಯುತ ಪೂಜಾರಿ, ಹೊಸತಾಗಿ ನಗರಸಭೆಗೆ ಆಯ್ಕೆಯಾದ ಗುರುಪ್ರಸಾದ್ ಪ್ರಭು, ಹರೀಶ್ ಕೆ.ಆರ್. ಇವರನ್ನು ಅಭಿನಂದಿಸಲಾಯಿತು. ಮಹೇಶ್ ಎ., ಮಚ್ಚೇಂದ್ರ, ನವೀನ್ ಪೂಜಾರಿ, ಉಮೇಶ್, ವೇಣುಗೋಪಾಲ, ಹರಿಪ್ರಸಾದ್, ಕೆ.ವಿ. ಸತ್ಯನಾರಾಯಣ ರಾವ್, ಪ್ರವೀಣ್ ಕುಮಾರ್, ಸುಜಯ ಶೆಟ್ಟಿ, ಪದ್ಮಾವತಿ, ಜಯಶ್ರೀ ಅಶೋಕ  ಉಪಸ್ಥಿತರಿದ್ದರು.

RELATED NEWS

You cannot copy contents of this page