ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯ: ಕೇಸು ದಾಖಲು

ಕಾಸರಗೋಡು: ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದು ಗಾಯಗೊಳಿಸಿದ ದೂರಿ ನಂತೆ ಕಾಸರಗೋಡು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಬೋವಿಕ್ಕಾನ ಕೊಡವಂಜಿ ನಿವಾಸಿ ಪ್ರಕಾಶನ್ (45) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಬೋವಿಕ್ಕಾನದ ಮುನೀರ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾರ್ಚ್ 31ರಂದು ರಾತ್ರಿ ನೆಲ್ಲಿಕುಂಜೆ ಜಂಕ್ಷನ್ ರಸ್ತೆಯಲ್ಲಿರುವ ಬಾರ್‌ನ ಬಳಿ ಆರೋಪಿ ತನ್ನೊಂದಿಗೆ ಜಗಳಕ್ಕಿಳಿದು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿಸಿದ್ದಾನೆ.

RELATED NEWS

You cannot copy contents of this page