ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ತಂಡದ 6ನೇ ಸೇವಾ ಯೋಜನೆ ಹಸ್ತಾಂತರ
ಮಂಜೇಶ್ವರ: ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ತಂಡದ 6ನೇ ಸೇವಾಯೋಜನೆಯನ್ನು ಮೀಂಜ ಪಂಚಾಯತ್‌ನ ಕಲ್ಲಗದ್ದೆ ಸುಂದರ ಪೂಜಾರಿಯವರಿಗೆ ನೀಡಲಾಯಿತು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಬೈಕಿನಿಂದ ಬಿದ್ದು ಬೆನ್ನೆಲುಬು ಮುರಿದು ಕೆಲಸಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾರೆ.ಇವರಿಗೆ 1 ಗಂಡು ಹಾಗೂ 10 ವರ್ಷ ಪ್ರಾಯದ ತ್ರಿವಳಿ ಹೆಣ್ಣುಮಕ್ಕಳಿದ್ದಾರೆ. ಇವರ ಮನೆಯ ಶೋಚನೀಯ ಅವಸ್ಥೆಯನ್ನು ಮನಗಂಡ ನಮ್ಮ ತಂಡ ರೂ.25000 ಮೊತ್ತವನ್ನು ನಿನ್ನೆ ಹಸ್ತಾಂತರಿಸಿದೆ. ಸಂಘಟನೆಯ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಅಲಾರು, ಕಾರ್ಯದರ್ಶಿ ಅನಿಲ್ ಪ್ರತಾಪ್ ನಗರ, ಐತ್ತಪ್ಪ ಪೂಜಾರಿ ಅರಿಯಾಲ ಸಹಿತ ಹಲವು ಸದಸ್ಯರು ಭಾಗವಹಿಸಿದ್ದರು.