ಬೆಂಗಳೂರಿನಲ್ಲಿ ಲಕ್ಷಾಂತರ ರೂ.ಗಳ ವಂಚನೆ: ಆರೋಪಿಗಳಿಗಾಗಿ ಮಂಜೇಶ್ವರದಲ್ಲಿ ಶೋಧ

ಮಂಜೇಶ್ವರ: ಬೆಂಗಳೂರು ಕೇಂದ್ರೀಕರಿಸಿ ನಡೆದ ಬೃಹತ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ಮಂಜೇಶ್ವರಕ್ಕೆ ವಿಸ್ತರಿಸಲಾಗಿದೆ. ಕರ್ನಾಟಕ ಪೊಲೀಸರ ಐದು ಮಂದಿ ತಂಡ ಮಂಜೇಶ್ವರಕ್ಕೆ ತಲುಪಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾ ಯಿಗಳ ವಂಚನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಇದರಲ್ಲಿ ಕೆಲವು ಮಂದಿ ಒಳಗೊಂಡಿದ್ದಾರೆ. ವಂಚನೆ ಬಳಿಕ ತಂಡ ಅಲ್ಲಿಂದ ತಲೆಮರೆಸಿಕೊಂ ಡಿದೆ. ಹೀಗೆ ತಲೆಮರೆಸಿಕೊಂಡವರು ಮಂಜೇಶ್ವರ ಭಾಗಕ್ಕೆ ತಲುಪಿದ್ದಾರೆಂಬ ಮಾಹಿತಿ ಲಭಿಸಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ವಿಸ್ತರಿಸಲಾ ಗಿದೆ. ಇಲ್ಲಿನ ಪೊಲೀಸರ ಸಹಾಯ ದೊಂದಿಗೆ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

You cannot copy contents of this page