ಬೇಕೂರು ಸೇವಾ ಭಾರತಿ ಕಲಾವೃಂದ ಹಾಗೂ ಭಜನಾ ಮಂದಿರದ ರಜತ ಮಹೋತ್ಸವ, ನೂತನ ಕಟ್ಟಡ ಉದ್ಘಾಟನೆ

ಉಪ್ಪಳ: ಬೇಕೂರು ಸೇವಾಭಾರತಿ ಕಲಾವೃಂದ ಹಾಗೂ ಭಜನಾ ಮಂದಿರದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡ ರಜತಾದ್ರಿಯ ಉದ್ಘಾಟನಾ ಸಮಾರಂಭ ನಾಳೆಯಿಂದ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಲಿದೆ. ನಾಳೆ ಪ್ರಾತ:ಕಾಲ ಗಣಹೋಮ, ಬೆಳಿಗ್ಗೆ 9.34ಕ್ಕೆ ರಜತಾದ್ರಿಯ ಪ್ರವೇಶೋತ್ಸವ, 10ಕ್ಕೆ ವಿವಿಧ ತಂಡಗಳಿAದ ಭಜನಾ ಸಂಕೀರ್ತನೆ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವಲನೆಗೊಳಿಸುವರು. ಸಂಜೆ 6.45ಕ್ಕೆ ಭಜನಾ ಮಂಗಳೋತ್ಸವ, 13ರಂದು ಬೆಳಿಗ್ಗೆ 10ರಿಂದ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಕುಣಿತ ಭಜನೆ, 7ರಿಂದ ಬೇಕೂರು ಶಾಲಾ ವಠಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಅಧ್ಯಕ್ಷತೆ ವಹಿಸುವರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರಜತ ಸಂಭ್ರಮವನ್ನು ಉದ್ಘಾಟಿಸುವರು. ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. ರಾತ್ರಿ 9ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ರಾತ್ರಿ 9.30ರಿಂದ ನಾಟಕ ಪ್ರದರ್ಶನಗೊಳ್ಳಲಿದೆ.

RELATED NEWS

You cannot copy contents of this page