ಭೂಕುಸಿತ ಸಂತ್ರಸ್ತರಿಗೆ ಸಾಂತ್ವನ ನುಡಿಯಲು ತಲುಪಿದ ಮೋಹನ್‌ಲಾಲ್

ವಯನಾಡು: ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ ನಾಶನಷ್ಟ ಉಂಟಾದವರಿಗೆ ಸಾಂತ್ವನ ನುಡಿಯಲು ನಟ ಮೋಹನ್‌ಲಾನ್ ಮೇಪಾಡಿಯ ಸಂತ್ರಸ್ತರ ಶಿಬಿರಕ್ಕೆ ತಲುಪಿದರು. ಇಂದು ಬೆಳಿಗ್ಗೆ ಸೇನಾ ಶಿಬಿರಕ್ಕೆ ತಲುಪಿದ ಬಳಿಕ ಲೆಫ್ಟ್‌ನೆಂಟ್ ಕೇನಲ್ ಕೂಡಾ ಆಗಿರುವ ಮೋಹನ್‌ಲಾಲ್ ದುರಂತ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದರು. ಸಂಕಷ್ಟಕ್ಕೊಳ ಗಾದವರನ್ನು ಸಂದರ್ಶಿಸಿದ ಬಳಿಕ ಮೋಹನ್‌ಲಾಲ್ ದುರಂತ ಭೂಮಿ ಯಾದ ಮುಂಡಕೈಗೆ ತೆರಳಿದರು.

ಇದೇ ವೇಳೆ ಮುಖ್ಯಮಂತ್ರಿಯ ಬರ ಪರಿಹಾರ ನಿಧಿಗೆ ಮೋಹನ್ ಲಾಲ್ 25 ಲಕ್ಷ ರೂಪಾಯಿ ಗಳನ್ನು ನೀಡಿದ್ದಾರೆ. 2018ರಲ್ಲಿ ಸಂಭವಿಸಿದ ಪ್ರವಾಹ ವೇಳೆಯೂ ಮುಖ್ಯಮಂತ್ರಿಯ ಬರ ಪರಿಹಾರ ನಿಧಿಗೆ ಧನ ಸಹಾಯ ನೀಡಿದ್ದರು.

RELATED NEWS

You cannot copy contents of this page