ಮಂಗಲ್ಪಾಡಿ ಪಂ.ನಲ್ಲಿ ಅವ್ಯವಹಾರ ಆರೋಪ ಬಿಜೆಪಿಯಿಂದ ಪಂ. ಮುಂದೆ ಧರಣಿ ಸತ್ಯಾಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಅವ್ಯವಹಾರ ನಡೆಯುತ್ತಿದೆಯೆಂದು ಆರೋಪಿಸಿ ಬಿಜೆಪಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ  ಪಂಚಾಯತ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ಪಕ್ಷದ  ಪಂ. ಸಮಿತಿ ಉಪಾಧ್ಯಕ್ಷ ಸುರೇಶ್ ಮುಟ್ಟಂ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಕಾರ್ಯದರ್ಶಿ ಮನುಲಾಲ್ ಮೇಲತ್ತ್, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಅನಿಲ್ ಕುಮಾರ್ ಕೆ.ಪಿ, ಪಂಚಾಯತ್ ಸದಸ್ಯರಾದ ಸುಧಾ ಗಣೇಶ್, ರೇವತಿ ಸಹಿತ ಹಲವರು ನೇತಾರರು, ಕಾರ್ಯ ಕರ್ತರು ಭಾಗವಹಿಸಿದರು. ಬಿಜೆಪಿ ಪಂ.  ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬಂದ್ಯೋಡು ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್ ವಂದಿಸಿದರು. ಪರಿಶಿಷ್ಟ ವಿಭಾಗದವರಿಗೆ ಶಿಕ್ಷಣದಂಗವಾಗಿ ನೀಡಲಾಗುವ ಕಂಪ್ಯೂಟರ್, ಲ್ಯಾಪ್‌ಟಾಪ್, ಅರ್ಹರಿಗೆ ನೀಡದೆ ವಂಚನೆ ನಡೆಸಲಾಗಿದೆ ಎಂದು ಆರೋಪಿಸಿ ಧರಣಿ ನಡೆಸಲಾಗುತ್ತಿದೆ.

RELATED NEWS

You cannot copy contents of this page