ಮಂಗಲ್ಪಾಡಿ ಪಂ.ನಲ್ಲಿ ತ್ಯಾಜ್ಯ ಸಂಸ್ಕರಣೆಗೆ ಡಿಜಿಟಲ್ ಆಪ್

ಮಂಗಲ್ಪಾಡಿ: ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಹೆಚ್ಚಿನ ಆರೋಪ ಕೇಳಬೇಕಾಗಿ ಬಂದಿದ್ದ ಮಂಗಲ್ಪಾಡಿ ಪಂಚಾಯತ್ ನೂತನ ವರ್ಷದಲ್ಲಿ ತ್ಯಾಜ್ಯ ಸಂಸ್ಕರಣೆಗೆ ಸ್ಮಾರ್ಟ್ ಗಾರ್ಬೇಜ್ ಮೋನಿಟರಿಂಗ್ ಸಿಸ್ಟಂ ಆಗಿರುವ ಡಿಜಿಟಲ್ ಆಪ್ಲಿಕೇಶನ್ ಹಸಿರುವ ಮಿತ್ರ ಆಪ್  ಬಿಡು ಗಡೆಗೊಳಿಸಿದರು. ಕೆಲ್ಟ್ರೋನ್‌ನೊಂದಿಗೆ ಸಹಕರಿಸಿ ಕ್ಯೂ ಆರ್ ಕೋಡ್ ವ್ಯವಸ್ಥೆಯಲ್ಲಿ ಈ ಚಟುವಟಿಕೆ ನಡೆಸಲಿದೆ. ಈ ಬಗ್ಗೆ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು.

ಮುಂದಿನ ವಾರ ಪ್ರತಿ ವಾರ್ಡ್‌ನಲ್ಲೂ ಇಬ್ಬರು ಕಾರ್ಯಕರ್ತರನ್ನು  ನೇಮಕಗೊಳಿಸಿ ಮನೆಗಳ, ಅಂಗಡಿಗಳ ಹಾಗೂ ಇತರ ಎಲ್ಲಾ ಸಂಸ್ಥೆಗಳ ಮಾಹಿತಿಗಳನ್ನು ಹಸಿರು ಮಿತ್ರ ಆಪ್‌ನಲ್ಲಿ ಅಪ್‌ಲೋಡ್ ಮಾಡಿ, ಬಳಿಕ ಎಲ್ಲಾ ಮಾಹಿತಿಗಳು ಎಲ್ಲರಿಗೂ ಬೆರಳ ತುದಿಯಲ್ಲಿ ಲಭಿಸುವ ವ್ಯವಸ್ಥೆಯನ್ನು ಜ್ಯಾರಿಗೊಳಿಸಲಾಗುವುದು. ಈ ಆಪ್‌ನ ಔಪಚಾರಿಕ ಉದ್ಘಾಟನೆಯನ್ನು ಪಂ. ಅಧ್ಯಕ್ಷೆ ರುಬೀನ ನೌಫಲ್  ಹಸಿರು ಕ್ರಿಯಾ ಸೇನೆ ಅಂಬಾಸಿಡರ್ ಮಜೀದ್ ಪಚ್ಚಂಬಳರಿಗೆ ನೀಡಿ ನಿರ್ವಹಿಸಿದರು. ಖೈರುನ್ನೀಸ ಉಮ್ಮರ್ ಅಧ್ಯಕ್ಷತೆ ವಹಿಸಿದರು. ಪಂ. ಸದಸ್ಯರು ಮಾತನಾಡಿದರು. ಕೆಲ್ಟ್ರೋನ್‌ನ ರೋಶಿದ ತರಬೇತಿ ನೀಡಿದರು. ಸಫ್ವಾನ ವಂದಿಸಿದರು.

RELATED NEWS

You cannot copy contents of this page