ಮಂಜೇಶ್ವರದಲ್ಲಿ ಕರಸೇವಕರಿಗೆ ಗೌರವಾರ್ಪಣೆ

ಮಂಜೇಶ್ವರ: ಶ್ರೀಮದನಂತೇಶ್ವರ ದೇವಳ, ತಿಲಕ ಗೆಳೆಯರ ಬಳಗದ ಆಶ್ರಯದಲ್ಲಿ ಕ್ಷೇತ್ರದ ವಿಭುದೇಂದ್ರ ಕಲಾಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ನಿತಿನ್‌ಚಂದ್ರ ಪೈ ಉದ್ಘಾಟಿಸಿದರು. ಕುಣಿತ ಭಜನೆ, ಶ್ರೀ ರಾಮತಾರಕ ಮಂತ್ರ ಪಠಣ ಜರಗಿತು. ಅಯೋಧ್ಯೆಯ ಪ್ರಾಣಪ್ರತಿಷ್ಠೆ ನೇರ ಪ್ರಸಾರ ಮಾಡ ಲಾಯಿತು. ಸಿಹಿತಿಂಡಿ ವಿತರಿಸಲಾ ಯಿತು. ಕರಸೇವೆಯಲ್ಲಿ ಭಾಗವಹಿಸಿದ ಪ್ರೇಮಾ ಕಾಮತ್, ಕಡಂಬಾರು ಕೇಶವ, ಗಣೇಶ ಸಫಲ್ಯ ಅಯ್ಯರ ಕಟ್ಟೆ, ರೋಹಿ ತಾಶ್ವ ಶೆಟ್ಟಿಗಾರ ಉದ್ಯಾವರ, ಗುಡ್ಡೆ, ಶ್ರೀ ಕೃಷ್ಣ ಗುಡ್ಡೆಮಾರ್, ರಾಜೇಶ್ ಉದ್ಯಾವರ, ಮನೋಹರ ಬೆಂಗರೆ, ಹರಿಪ್ರಸಾದ್ ಬೆಂಗರೆ, ಸದಾಶಿವ ತೂಮಿನಾಡು, ವೀರಭಾಸ್ಕರ, ಚಿನ್ಮಯಾನಂದ ಆಚಾರ್ಯರನ್ನು ಗೌರವಿಸಲಾಯಿತು. ವಿಶೇಷ ಪೂಜೆ, ಅನ್ನ ಸಂತರ್ಪಣೆ ಜರಗಿತು.

ಈ ಸಂದರ್ಭದಲ್ಲಿ ತಿಲಕ ಗೆಳೆಯರ ಬಳಗದ ಸುನಿಲ್ ಕುಮಾರ್, ಕಾಸರಗೋಡು ಜಿಲ್ಲಾ ವಿಶ್ವಹಿಂದೂ ಪರಿಷತ್‌ನ ಮಂದಿರ ಪರ ಪ್ರಮುಖ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಕಾರ್ಯವಾಹ ಮಹಾಬಲ, ಬಿಜೆಪಿ ಕೇರಳ ರಾಜ್ಯ ಪರಿಷತ್ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಯಾದವ ಕೀರ್ತೇಶ್ವರ, ಬಳಗದ ಕಾರ್ಯದರ್ಶಿ ವಿಕಾಸ್ ಕುಲಾಲ್, ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

You cannot copy contents of this page