‘ಮಣಿಪುರ ಮೂಲಕ ನೀವು ಭಾರತವನ್ನು ಕೊಂದಿದ್ದೀರಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ


ನವದೆಹಲಿ: ‘ಕಳೆದ ಬಾರಿ ನಾನು ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ್ದಾಗ ನನ್ನ ಮಾತುಗಳನ್ನು ಅದಾನಿ ಮೇಲೆ ಕೇಂದ್ರೀಕರಿಸಿದ್ದೆ. ಇದರಿಂದ ನಿಮ್ಮ ಹಿರಿಯ ನಾಯಕನಿಗೆ ನೋವಾಗಿರಬಹುದು. ಆ ನೋವು ನಿಮ್ಮ ಮೇಲೆ ಕೂಡ ಪರಿಣಾಮ ಬೀರಿರಬಹುದು ಎಂದು ನಾನು ಭಾವಿಸುತ್ತೇನೆ. ಅದಕ್ಕೆ ನಿಮ್ಮ ಬಳಿ ಇಂದು ಕ್ಷಮೆ ಕೋರುತ್ತೇನೆ. ಆದರೆ ಅಂದು ನಾನು ಆಡಿರುವ ಮಾತು ಸತ್ಯ. ಇವತ್ತು ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು ಭಯಪಡಬೇಕಾಗಿಲ್ಲ, ಏಕೆಂದರೆ ನನ್ನ ಇಂದಿನ ಭಾಷಣ ಅದಾನಿ ಮೇಲೆ ಕೇಂದ್ರೀಕರಿಸಿಲ್ಲ’ ಹೀಗೆ ಹೇಳುತ್ತಲೇ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾದ ಮಾತುಗಳೊಂದಿಗೆ ಲೋಕಸಭೆಯಲ್ಲಿ ತಮ್ಮ ಮಾತುಗಳನ್ನು ಆರಂಭಿಸಿದರು ರಾಹುಲ್ ಗಾಂಧಿ.

ಮೋದಿ ಉಪನಾಮ ಕುರಿತು ೨೦೧೯ರಲ್ಲಿ ರ‍್ನಾಟಕದಲ್ಲಿ ಭಾಷಣವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಅದಕ್ಕೆ ಸಂಬಂಧಪಟ್ಟಂತೆ ಗುಜರಾತ್ ನಲ್ಲಿ ಕರ‍್ಟ್ ರಾಹುಲ್ ಗಾಂಧಿ ವಿರುದ್ಧ ತರ‍್ಪು ನೀಡಿದಾಗ ಅವರನ್ನು ಸ್ಪೀಕರ್ ಸಂಸತ್ ಸದಸ್ಯ ಸ್ಥಾನದಿಂದ ಅರ‍್ಹಗೊಳಿಸಿದ್ದರು. ಕರ‍್ಟ್ ತರ‍್ಪಿನ ವಿರುದ್ಧ ರಾಹುಲ್ ಗಾಂಧಿ ಸುಪ್ರೀಂ ಕರ‍್ಟ್ ಮೆಟ್ಟಿಲೇರಿ ಅದು ಇತ್ತೀಚೆಗೆ ರಾಹುಲ್ ಗಾಂಧಿ ವಿರುದ್ಧ ಶಿಕ್ಷೆಗೆ ತಡೆ ತಂದಿದ್ದರಿಂದ ಲೋಕಸಭೆ ಸದಸ್ಯರ ಅರ‍್ಹತೆಯನ್ನು ಸ್ಪೀಕರ್ ವಾಪಸ್ ತೆಗೆದುಕೊಂಡು ಇದೀಗ ಸದನಕ್ಕೆ ಮತ್ತೆ ರಾಹುಲ್ ಗಾಂಧಿ ಮರಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page