ಮಧೂರು ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ: ಸದಸ್ಯರಿಗೆ 13 ಶೇ. ಡಿವಿಡೆಂಡ್ ಘೋಷಣೆ
ಮಧೂರು: ಮಧೂರು ಸೇವಾ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಬ್ಯಾಂಕ್‌ನ ಅಧ್ಯಕ್ಷ ಪ್ರಭಾ ಶಂಕರ ಎ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಹಕಾರಿ ಸಂಘದ ಉಪನಿ ಬಂಧಕ ಮನೋಜ್ ಕುಮಾರ್ ಕೆ.ವಿ ಉಪಸ್ಥಿತರಿದ್ದು ಮಾತನಾಡಿದರು. ಆಡಳಿತ ವರದಿ, ಲೆಕ್ಕಪತ್ರ, ಆಡಿಟ್ ರಿಪೋರ್ಟ್ ಅಂಗೀಕರಿಸಲಾಯಿತು. ಪ್ರಸ್ತುತ ವರ್ಷ ಬ್ಯಾಂಕ್ 34.92 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ 13 ಶೇ. ಡಿವಿಡೆಂಡ್ ಘೋಷಿಸಲಾಯಿತು. ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪ್ಲಸ್‌ಟು ವಿಭಾಗದಲ್ಲಿ ಎ ಪ್ಲಸ್ ಪಡೆದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯ ಸಂಜೀವ ಸುವರ್ಣ, ವಿನೋದ್ ಕುಮಾರ್ ಸಿ.ಎಚ್, ಕೃಷ್ಣ ಮೋಹನ ಎ, ಪುಷ್ಪಲತಾ ಎಲ್.ಎನ್, ವಿಜಯಲಕ್ಷ್ಮಿ, ಕವಿತಾ ವಿ, ಬ್ಯಾಂಕ್‌ನ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದರು. ಉಪಾಧ್ಯಕ್ಷ ಡಿ. ಸರ್ವೇಶ್ ಕುಮಾರ್ ಭಟ್ ಸ್ವಾಗತಿಸಿ, ನಿರ್ದೇಶಕ ಜೀವಾನಂದ ಎಸ್ ವಂದಿಸಿದರು.