ಮಧ್ಯವಯಸ್ಕ ಮನೆಯೊಳಗೆ ನೇಣುಬಿಗಿದು ಸಾವು

ಕಾಸರಗೋಡು: ಮಧ್ಯವಯಸ್ಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಡ್ಕತ್ತಬೈಲು ಕುದ್ರು ಹೌಸ್‌ನ ದಿ| ನಾರಾಯಣ ಶೆಟ್ಟಿಯವರ   ಪುತ್ರ ಚಂದ್ರ (೫೩) ಎಂಬವರು ಮೃತ ವ್ಯಕ್ತಿ.  ಇವರು ಇಂದು ಬೆಳಿಗ್ಗೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕೂಲಿ ಕಾರ್ಮಿಕನಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ತಾಯಿ ಶಾರದ, ಪತ್ನಿ ಸುಮತಿ, ಮಕ್ಕಳಾದ  ದೀಕ್ಷಿತ್, ದೀಪಿಕ, ಸಹೋದರರಾದ ಶಶಿ, ಮಹಾಬಲ, ಲೋಕೇಶ್ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page